ಕಲಾವಿದರನ್ನು ಗೌರವಿಸುವ ಕಾರ್ಯ ಶ್ಲಾಘನೀಯ ದುಗ್ಗಣ್ಣ ಸಾವಂತ ಹೇಳಿಕೆ

New Project (18)
Published on

ಮೂಲ್ಕಿ: ಸೇವಾ ಸಂಸ್ಥೆಗಳು ಕಲಾ ಪ್ರಾಕಾರಗಳನ್ನು ಬೆಳೆಸುವ ಜತೆಗೆ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದು ಮೂಲ್ಕಿ ಸೀಮೆಯ ಅರಸ ದುಗ್ಗಣ್ಣ ಸಾವಂತ ಹೇಳಿದರು.

ಪಡುಪಣಂಬೂರು ಶಾನ್ ಇಲೆಕ್ಟ್ರಿಕಲ್ಸ್, ತೋಕೂರು ಕುಮಾರ್ ಆರ್ಟ್ಸ್ ಸಂಯೋಜನೆಯಲ್ಲಿ ಅರಮನೆಯ ಬಾಕಿಮಾರು ಗದ್ದೆಯಲ್ಲಿ ನಡೆದ ಸುವರ್ಣ ಸಂಭ್ರಮ ಹಾಗೂ ಸಾಧಕರಿಗೆ ಗೌರವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತೋಕೂರು ಕುಮಾರ್ ಆರ್ಟ್ಸ್ ಶಿವಕುಮಾರ್, ಕಲಾವಿದರಾದ ಶರತ್ ಭಟ್ ತೋಕೂರು, ಶಂಕರ್ ಕಾಪಿಕಾಡು, ಜೀವನ್ ಪಡುತೋಟ, ಆರ್.ಎನ್.ಶೆಟ್ಟಿಗಾರ್, ನರೇಂದ್ರ ಪಡುತೋಟ, ಉದ್ಯಮಿ ಜೈ ಕೃಷ್ಣ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಚಂದ್ರಶೇಖರ್, ಹೊಯ್ಗೆಗುಡ್ಡೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ರಾಮ ಭಟ್, ಸುವರ್ಣ ಮೂಲಸ್ಥಾನದ ಸುಚೇಂದ್ರ ಅಮೀನ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ಉಪಾಧ್ಯಕ್ಷ ಶ್ಯಾಮಪ್ರಸಾದ್, ಜನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್, ರಂಗ ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್ ಬೈಲ್, ಚಂದ್ರಹಾಸ್ ಪಡುತೋಟ, ಶಾನ್ ಇಲೆಕ್ಟ್ರಿಕಲ್ಸ್ ಸುಧೇಶ್ ಕುಮಾರ್ ಉಪಸ್ಥಿತರಿದ್ದರು.

ಉಪನ್ಯಾಸಕ ದಿನಕರ್ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net