ಪದ್ಮಶ್ರೀ ಪುರಸ್ಕೃತ ಕೆ.ಎಸ್.ರಾಜಣ್ಣಗೆ ಸನ್ಮಾನ

29M.D.R.7
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೆ.ಎಸ್.ರಾಜಣ್ಣ ಅವರಿಗೆ ತಾಲೂಕಿನ ಸರ್ವೋದಯ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದಿಂದ ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಲಾಯಿತು. ಎಸ್.ಸಿ.ರಮೇಶ್, ಬಿ.ಬೋರೇಗೌಡ, ಸಾಯಿ ಪ್ರಸನ್ನ, ಆನಂದಚಾರಿ, ಶಿವಪ್ಪ ಇದ್ದರು.
Published on

ಮದ್ದೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ ಅವರಿಗೆ ತಾಲೂಕಿನ ಸರ್ವೋದಯ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸನ್ಮಾನಿಸಲಾಯಿತು.


ಅಂಗವಿಕಲರಿಗೆ ರಾಜಕೀಯ ಮೀಸಲಾತಿ ಬೇಕು. ಅದರಂತೆ ಪಂಚಾಯ್ತಿ ಮಟ್ಟದಲ್ಲಿ ಕನಿಷ್ಠ ಎರಡು ಸೀಟು ಮೀಸಲಿಡಬೇಕು. ರಾಜ್ಯಾದ್ಯಂತ ಸಮಾನವಾಗಿ ಪಿಂಚಣಿಯನ್ನು 3000 ರೂ. ಮಾಡಬೇಕು ಎಂದು ಸಂಘದ ಅಧ್ಯಕ್ಷ ಎಸ್.ಸಿ.ರಮೇಶ್ ಹಾಗೂ ಇತರರು ಗಮನ ಸೆಳೆದಾಗ, ಈ ವಿಷಯವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯುದಾಗಿ ಭರವಸೆ ನೀಡಿದರು.
ಸರ್ವೋದಯ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಸಿ.ರಮೇಶ್, ಅಂತಾರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ಬಿ.ಬೋರೇಗೌಡ, ಸಮಾಜ ಸೇವಕ ಸಾಯಿ ಪ್ರಸನ್ನ ಗೆಜ್ಜಲಗೆರೆ, ಮುಖಂಡರಾದ ದೇಶಹಳ್ಳಿ ಶಿವಪ್ಪ, ತೈಲೂರು ಆನಂದಚಾರಿ, ಸುರೇಶ್, ಬಸವರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net