ದ್ವಿತೀಯ ರ‍್ಯಾಂಕ್ ಪಡೆದ ಚಿನ್ಮಯ್‌ಗೆ ಸನ್ಮಾನ

sanmana
ಚಿನ್ಮಯ್ ಜಿ.ಕೆ ಅವರನ್ನು ಗುರುವಾಯನಕೆರೆ ವಿದ್ವತ್ ಪಿ.ಯು ಕಾಲೇಜಿನಲ್ಲಿ ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಖಜಾಂಜಿ ಎಂ.ಕೆ.ಕಾಶಿನಾಥ್ ಮೊದಲಾದವರಿದ್ದರು.
Published on

ಬೆಳ್ತಂಗಡಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿ, ರಾಜ್ಯಕ್ಕೆ 2ನೇ ರ‌್ಯಾಂಕ್ ಗಳಿಸಿರುವ ಬೆಳ್ತಂಗಡಿಯ ವಿದ್ಯಾರ್ಥಿ ಚಿನ್ಮಯ್ ಜಿ.ಕೆ ಅವರನ್ನು ವಿದ್ವತ್ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.

ಚಿನ್ಮಯ್ ಜಿ.ಕೆ ಅವರ ತಂದೆ ಬೆಳ್ತಂಗಡಿ ಕಾಲೇಜಿನ ಕನ್ನಡ ಉಪನ್ಯಾಸಕ ಗಣೇಶ್ ಭಟ್ ಮಗನ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಖಜಾಂಜಿ ಎಂ.ಕೆ.ಕಾಶಿನಾಥ್ ಮೊದಲಾದವರು, ಚಿನ್ಮಯ್‌ಜಿ.ಕೆ, ವಿದ್ವತ್ ಪ್ರೇರಣಾ ಫೌಂಡೇಶನ್ ಕೋಚಿಂಗ್ ವಿದ್ಯಾರ್ಥಿಗಳಾದ 617 ಅಂಕಗಳಿಸಿದ ಅಜಿತ್ ಎಚ್.ಸಿ, 613 ಅಂಕಗಳಿಸಿರುವ ಸಿಮ್ರಾ ಪರ್ವೀನ್, 602 ಅಂಕ ಗಳಿಸಿರುವ ದ್ರವೀಣ್ ಭಟ್ ಹಾಗೂ 597 ಅಂಕಗಳಿಸಿರುವ ಯಶಸ್ವಿನಿ ಜೆ.ಬಿ. ಅವರನ್ನು ಗೌರವಿಸಿದರು.

ಪ್ರೇರಣಾ ಕೋಚಿಂಗ್ ವಿದ್ಯಾರ್ಥಿ: ಚಿನ್ಮಯ್ ಜಿ.ಕೆ. 625ಕ್ಕೆ 624 ಅಂಕಗಳಿಸಿದ್ದು, ಈ ಅಮೋಘ ಸಾಧನೆ ಮಾಡಿದ ರಾಜ್ಯದ ಏಳು ಪ್ರತಿಭಾವಂತರಲ್ಲಿ ಒಬ್ಬ. ದ.ಕ. ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಾಧನೆಗೈದಿದ್ದಾರೆ. ಚಿನ್ಮಯ್ ಜಿ.ಕೆ ಪ್ರಸ್ತುತ ವಿದ್ವತ್ ಪಿಯು ಕಾಲೇಜಿನಲ್ಲಿ ವಿದ್ವತ್ ಪ್ರೇರಣಾ ಫೌಂಡೇಷನ್ ಕೋಚಿಂಗ್ ಪಡೆದುಕೊಳ್ಳುತ್ತಿದ್ದು, ಅಲ್ಲಿನ ಎಕ್ಸ್‌ಪರ್ಟೈಜ್ ಟೆಸ್ಟ್‌ಗಳಲ್ಲಿಯೂ ನಿರಂತರ ಸ್ಟಾರ್ ಪರ್ಫಾರ್ಮರ್ ಆಗಿ ಹೊರಹೊಮ್ಮಿರುವುದು ವಿಶೇಷ. ಚಿನ್ಮಯ್ ಜಿ.ಕೆ, ಜೆ.ಇ.ಇ ಅಡ್ವಾನ್ಸ್ಡ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡು ಐ.ಐ.ಟಿಗೆ ಪ್ರವೇಶ ಪಡೆಯುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net