ಹಿರಿಯರನ್ನು ಗೌರವಿಸಲಿ

11Athni3
Published on

ಅಥಣಿ: ಮನೆ ಹಾಗೂ ಸಮಾಜದಲ್ಲಿರುವ ಹಿರಿಯರನ್ನು ಗೌರವಿಸುವ ಮೂಲಕ ಇಂದಿನ ಯುವ ಪೀಳಿಗೆಯಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಬಣಜಿಗ ಸಮಾಜ ಕೈಗೊಂಡ ಕಾರ್ಯ ಮಾದರಿಯಾಗಿದೆ ಎಂದು ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಹೇಳಿದರು.

ಸ್ಥಳೀಯ ಶೆಟ್ಟರಮಠದಲ್ಲಿ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಈಚೆಗೆ ಹಮ್ಮಿಕೊಂಡಿದ್ದ 75 ವರ್ಷದ ಹಿರಿಯರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಣಜಿಗ ಸಮಾಜದ ಅಧ್ಯಕ್ಷ ಸಂಗಪ್ಪ ಉಣ್ಣಿ ಮಾತನಾಡಿ, ಹಲವು ವರ್ಷಗಳಿಂದ ಪ್ರತಿ ತಿಂಗಳು ವಿಶೇಷ ಕಾರ್ಯಕ್ರಮ ಮಾಡುವ ಮೂಲಕ ಸಮಾಜದ ಒಳತಿಗಾಗಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಸಂಘದಿಂದ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ರೂಪಿಸುತ್ತೇವೆ ಎಂದು ತಿಳಿಸಿದರು.

75 ವರ್ಷದ ಕಲಾವತಿ ಬುರ್ಲಿ, ಶ್ರೀಶೈಲ ಬುರ್ಲಿ, ಕಮಲಕಾಂತ ಮೂತ್ತೂರ, ಮುರಗೆಪ್ಪ ಗುಡೋಡಗಿ, ಪ್ರಕಾಶ ಬುರ್ಲಿ, ವಿಶ್ವನಾಥ ಸೊಳಸಿ, ಬಸವರಾಜ ನೂಲಿ, ಬಸಪ್ಪ ದಲಾಲ, ಬಾಲಚಂದ್ರ ಗುಳ್ಳ, ಬಸವರಾಜ ಗುಡೋಡಗಿ ಅವರನ್ನು ಗೌರವಿಸಲಾಯಿತು. ಮಹೇಶ ಚುನಮುರಿ, ಅಣವೀರ ಅಣೆಪ್ಪನವರ, ಆನಂದ ಪಾಂಗಿ, ಶಿವಾನಂದ ಬುರ್ಲಿ, ಶಿವಕುಮಾರ ಮನಸಿ, ರಾಜು ಗುಡೊಡಗಿ, ಸಂಪತ್ ಸೊಳಸಿ, ಮಹಾಂತೇಶ ಉಕ್ಕಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net