

ಮೂಲ್ಕಿ: ಗ್ರಾಮೀಣ ಬಡ ವರ್ಗದ ಕಷ್ಟಗಳನ್ನು ತಿಳಿದು ಆರ್ಥಿಕ, ಶೈಕ್ಷಣಿಕ ಸಹಕಾರದೊಂದಿಗೆ ಎಳೆಯರಿಗೆ ಸಂಸ್ಕೃತಿ, ಸಂಸ್ಕಾರ ಮತ್ತು ಸಮಾಜಮುಖಿ ಕರ್ತವ್ಯ, ಜ್ಞಾನ ನೀಡಿ ವ್ಯಕ್ತಿತ್ವ ವಿಕಸನ ಮಾಡಿದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು. ಜೆಸಿಐ ಮೂಲ್ಕಿ ಶಾಂಭವಿ ಸಂಸ್ಥೆ 42ನೇ ವರ್ಷದ ಜೇಸಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಸರ್ಕಾರಿ ಮತ್ತು ಕನ್ನಡ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಮತ್ತು ಸಮವಸ್ತ್ರ ವೆಚ್ಚವನ್ನು ನೀಡುತ್ತಾ ಬರುತ್ತಿರುವ ದಾನಿ ಮೂಲ್ಕಿ ಉದ್ಯಮಿ ಜಾನ್ ಕ್ವಾಡರ್ಸ್ ಅವರನ್ನು ಗೌರವಿಸಲಾಯಿತು.
ಜೆಸಿಐ ಸಂಸ್ಥೆ ಅಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮೂಲ್ಕಿ ಸೀಮೆ ಬಂಕಿ ನಾಯಕರು ಹಳೆಯಂಗಡಿ, ಕೇಶವಾನಂದ ಸ್ವಾಮೀಜಿ, ಡಾ.ಹರಿಶ್ಚಂದ್ರ ಪಿ.ಸಾಲ್ಯಾನ್, ಜಯಪಾಲ ಶೆಟ್ಟಿ ಐಕಳ, ಜೇಸಿ ಸಂಸ್ಥೆ ಪದಾಧಿಕಾರಿಗಳಾದ ಅಶೋಕ್ ಕುಮಾರ್ ಶೆಟ್ಟಿ, ಪ್ರವೀಣ, ಆನಂದ, ಎಚ್.ವಾಸು ಪೂಜಾರಿ, ಅನಿಲ್ ಕೊಲಕಾಡಿ, ಬಾಲಚಂದ್ರ ಸನಿಲ್, ಚಂದ್ರಶೇಖರ ಶೆಟ್ಟಿ, ಸತೀಶ್ ಕಿಲ್ಪಾಡಿ, ಕೇಶವ ಸುವರ್ಣ, ಭುಜಂಗ ಕವತ್ತಾರು ಮತ್ತಿತರರು ಉಪಸ್ಥಿತರಿದ್ದರು. ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.