ಸಾಧನೆಗೆ ಪ್ರೇರಣೆಯಾಗಿದೆ ಸನ್ಮಾನ, ಭಾಗವತ ಅನಂತ ಹೆಗಡೆ ದಂತಳಿಗೆ ಹೇಳಿಕೆ

10 ylp 01 (yaksha)
Published on

ಯಲ್ಲಾಪುರ: ಪಟ್ಟಣದ ಗಾಂಧಿ ಕುಟೀರದಲ್ಲಿ ಯಕ್ಷಾಭಿಮಾನಿ ಬಳಗ ಯಲ್ಲಾಪುರ ಹಾಗೂ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ನಡೆಯಿತು.
ಪ್ರಸಿದ್ಧ ಭಾಗವತ ಅನಂತ ಹೆಗಡೆ ದಂತಳಿಗೆ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಅನಂತ ಹೆಗಡೆ ಮಾತನಾಡಿ, ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಕಲಾ ಮಾತೆಯ ಅನುಗ್ರಹದೊಂದಿಗೆ ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಿದೆ ಎಂದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ, ಪತ್ರಕರ್ತ ಹರಿಪ್ರಕಾಶ ಕೋಣೆಮನೆ, ಪಿಎಲ್​ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ, ಅರ್ಥಧಾರಿ ಎಂ.ಎನ್. ಹೆಗಡೆ, ಟಿಎಸ್​ಎಸ್ ನಿರ್ದೇಶಕ ಕೃಷ್ಣ ಹೆಗಡೆ ಜೂಜಿನಬೈಲ್, ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನದ ಮುಖ್ಯಸ್ಥ ರಾಘವೇಂದ್ರ ಆಚಾರಿ ಜನ್ಸಾಲೆ, ಸಂಘಟಕರಾದ ಸುಬ್ಬಣ್ಣ ಕಂಚಗಲ್, ರಾಘವೇಂದ್ರ ಭಟ್ಟ ಬೆಳಸೂರು, ಎಂ.ಆರ್, ವಡ್ರಮನೆ, ಶಿವರಾಮ ಭಟ್ಟ ಕಂಚಗಲ್, ಶ್ಯಾಮ ಆಚಾರಿ, ಮಂಜುನಾಥ ಭಟ್ಟ ದೇವದಮನೆ, ವಿಕಾಸ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಉಮೇಶ ಭಾಗ್ವತ ಇದ್ದರು. ಎನ್.ಎಸ್. ಭಟ್ಟ ನಿರ್ವಹಿಸಿದರು.
ಬಡಗು ಹಾಗೂ ತೆಂಕಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ವಾಲಿ ಮೋಕ್ಷ, ಶ್ರೀಕೃಷ್ಣ ಪಾರಿಜಾತ ಹಾಗೂ ಚಕ್ರವ್ಯೂಹ ಯಕ್ಷಗಾನ ಪ್ರದರ್ಶನಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net