ಭಾರತೀಯರು ಎನ್ನುವ ಭಾವ ಬೆಳೆಯಲಿ

oplus_2
ಬಸವಕಲ್ಯಾಣ ತಾಲೂಕಿನ ಪರ್ತಾಪುರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಂಚ ಕಮಿಟಿಯಿಂದ ಎಂಎಲ್‌ಸಿ ಎಂ.ಜಿ.ಮುಳೆ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ದಿಲೀಪ ಶಿಂಧೆ, ನರಸಿಂಗರೆಡ್ಡಿ, ಶೇಷರಾವ ಗಾಯಕವಾಡ, ಪಿಂಟು ಕಾಂಬಳೆ, ಯುವರಾಜ ಬೆಂಡೆ, ವಿಜಯಕುಮಾರ ಡಾಂಗೆ, ರಂಗರಾವ ಸೂರ್ಯವಂಶಿ, ಶ್ರಾವಣ ಗಾಯಕವಾಡ, ವಾರಿಸ್‌ಅಲಿ, ತಹಸೀನ್‌ಅಲಿ ಜಮಾದಾರ, ಖಾಸೀಂ ಬೇಗ. ದಯಾನಂದ ಬೇಲೂರೆ, ಶೇಷರಾವ ಗಾಯಕವಾಡ, ಭಾವುರಾವ ಕಾಂಬಳೆ, ರಂಗರಾವ ಸೂರ್ಯವಂಶಿ, ಶ್ರಾವಣ ಇದ್ದರು.
Published on

ಬಸವಕಲ್ಯಾಣ: ಜಾತಿ, ಧರ್ಮ ಹೆಸರಿನಲ್ಲಿ ಭೇದ-ಭಾವ ಮರೆತು ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಒಂದು ಎನ್ನುವ ವಿಶಾಲವಾದ ಮನೋಭಾವ ಎಲ್ಲರಲ್ಲಿಯೂ ಬೆಳೆಯಬೇಕು ಎಂಎಲ್ಸಿ ಎಂ.ಜಿ.ಮುಳೆ ಹೇಳಿದರು.

ತಾಲೂಕಿನ ಪರ್ತಾಪುರ ಗ್ರಾಮದ ಭೀಮನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಂಚ ಕಮಿಟಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು ಮಾತನಾಡಿದರು.

ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಡಾ.ಅಂಬೇಡ್ಕರ್ ಅವರಂಥ ಮಹಾನ್ ನಾಯಕರನ್ನು ಹಾಗೂ ದೇಶಕ್ಕಾಗಿ ಹೋರಾಡಿದ ದೇಶ ಭಕ್ತರನ್ನು ಒಂದು ಜಾತಿ ಸಮುದಾಯಕ್ಕೆ ಸೀಮಿತಗೊಳಿಸಬಾರದು. ಅವರ ತತ್ವಾದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಎಲ್ಲರೂ ಪ್ರಯತ್ನಿಸಬೇಕು. ಅವರು ತೋರಿದ ದಾರಿಯಲ್ಲಿ ನಡೆಯಬೇಕು ಎಂದರು.

ಬೌದ್ಧಾಚಾರ್ಯ ರವೀಂದ್ರ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಉಪನ್ಯಾಸಕರ ಸಂಘದ ರಾಜ್ಯ ಕಾರ್ಯದರ್ಶಿ ನರಸಿಂಗರೆಡ್ಡಿ ಗದಲೇಗಾಂವ, ತಾಪಂ ಮಾಜಿ ಉಪಾಧ್ಯಕ್ಷ ದಿಲೀಪ ಶಿಂಧೆ, ರಾಜು ಚೌಧರಿ, ಚಾಮುಂಡಿ ಭೆಂಡೆ, ಮಾತನಾಡಿದರು. ಮಾನವ ಬಂಧುತ್ವ ವೇದಿಕೆಯ ತಾಲೂಕಾ ಅಧ್ಯಕ್ಷ ಪಿಂಟು ಕಾಂಬಳೆ ಸ್ವಾಗತಿಸಿದರು, ಸಮತಾ ಸೈನಿಕ ದಳದ ದತ್ತಾತ್ರೇಯ ಸೂರ್ಯವಂಶಿ ವಂದಿಸಿದರು.

ಮುಖಂಡರಾದ ಅರ್ಜುನ ಕನಕ, ಮೀರ್ ವಾರಿಸ್‌ಅಲಿ, ಮೀರ್ ತಹಸೀನ್‌ಅಲಿ ಜಮಾದಾರ, ಗ್ರಾಮ ಅಧ್ಯಕ್ಷೆ ಶೋಭಾ ಮೇತ್ರೆ, ಯುವರಾಜ ಬೆಂಡೆ, ಖಾಸಿಂ ಬೇಗ್, ಕಿಶೋರ್ ಬಿರಾದಾರ, ದಯಾನಂದ ಬೇಲೂರೆ, ಸುರಜ್ ದಾವನಗಾಂವೆ, ಸುಧೀರ್ ವಾಡೆಕರ್, ಗೌತಮ ಜಾಂತೆ, ವಿಜಯಕುಮಾರ ಡಾಂಗೆ, ಶ್ರೀಮಂತ ಮಹಾಜನ, ಖಂಡೇರಾವ ಕುಲಕರ್ಣಿ, ಬಾಲಾಜಿ ಕಾಂಬಳೆ, ವಿದ್ಯಾಸಾಗರ ಉಡ್ಚನ, ಇಸ್ಮಾಯಿಲ್ ಬಡಾಯಿ, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ ಕಾಂಬಳೆ, ಅಂಬೇಡ್ಕರ್ ಪಂಚ ಕಮಿಟಿಯ ಶೇಷರಾವ ಗಾಯಕವಾಡ, ಭಾವುರಾವ ಕಾಂಬಳೆ, ರಂಗರಾವ ಸೂರ್ಯವಂಶಿ, ಶ್ರಾವಣ ಗಾಯಕವಾಡ, ಪ್ರಲ್ಹಾದ ಕಾಂಬಳೆ, ಸಿದ್ರಾಮ ಗಾಯಕವಾಡ, ವಿಲಾಸ ಗಾಯಕವಾಡ, ಪ್ರಕಾಶ ಖರ್ಗೆ, ರವಿ ಕಾಂಬಳೆ, ಭಾಗ್ಯವಾನ ಗಾಯಕವಾಡ, ಸಂದೇಶ ಕಾಂಬಳೆ, ಗೌತಮ ಖರ್ಗೆ, ವಿಜಯಕುಮಾರ ಸೂರ್ಯವಂಶಿ , ವೈಶಾಲಿ ಹಾಗೂ ರಮಾಬಾಯಿ ಮಹಿಳಾ ಮಂಡಳದ ಸರ್ವ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net