

ಕೊಪ್ಪಳ:ಹೊನ್ನೂರಮಟ್ಟಿ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಹೇಳಿದರು.
ತಾಲೂಕಿನ ಹುಲಿಗಿ ಗ್ರಾಪಂ ವ್ಯಾಪ್ತಿಯ ಹೊನ್ನೂರ ಮಟ್ಟಿ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗುರುವಾರ ಭೇಟಿ ನೀಡಿ ಮಾತನಾಡಿದರು.
ಗಾಮಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಹೇಗೆ ವಿಲೇವಾರಿ ಮಾಡಬಹುದು ಎಂಬುದಕ್ಕೆ ಘಟಕ ಮಾದರಿಯಾಗಿದೆ. ಸಂಗ್ರಹಗೊಂಡ ಕಸವನ್ನು ವಿಂಗಡಿಸಿ ಅದರಿಂದ ಉಪ ಉತ್ನನ್ನಗಳನ್ನು ತಯಾರಿಸುವುದರಿಂದ ಪರಿಸರ ಉಳಿಸಬಹುದು. ತ್ಯಾಜ್ಯ ಸಮಸ್ಯೆಯೂ ನಿವಾರಣೆ ಆಗಲಿದೆ. ರಾಜ್ಯದ ಇತರ ತ್ಯಾಜ್ಯ ವಿಲೇವಾರಿ ಘಟಕದವರು ಇದನ್ನು ನೋಡಿ ಕಲಿಯಬೇಕೆಂದು ಪ್ರಶಂಸೆ ವ್ಯಕ್ತಪಡಿಸಿದರು.
ಘಟಕದ ಗೌರವ ಅಧ್ಯಕ್ಷ ಜನಾರ್ದನ ಹುಲಿಗಿ ಮಾತನಾಡಿದರು. ಕಾರ್ಯದರ್ಶಿ ಎಲ್ಲ ವಿಭಾಗಗಳನ್ನು ವೀಕ್ಷಿಸಿದರು. ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಸಂಖ್ಯೆ, ಅದಕ್ಕೆ ತಗಲುವ ವೆಚ್ಚ ಇತರ ಮಾಹಿತಿ ಪಡೆದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯವಿಭಾಗದ ಮುಖ್ಯಇಂಜಿನೀಯರ್ ಅಜೀಜ್ ಹುಸೇನ್, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಬಳ್ಳಾರಿ ವಲಯ ಅಧೀಕ್ಷಕ ಅಭಿಯಂತರ ವೀರಪ್ಪ ಅಡಿವೆಪ್ಪನವರ, ಇಇ ಮಹೇಶ್ ಶಾಸ್ತ್ರಿ, ತಾಪಂ ಇಒ ದುಂಡಪ್ಪ ತುರಾದಿ, ಹುಲಿಗಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಗುಂಗಾಡಿ ಇತರರಿದ್ದರು.