ಹೊನ್ನುಗ್ಗಿ ಹಬ್ಬ ಆಚರಣೆ

LXR ettu
Published on

ಲಕ್ಷ್ಮೇಶ್ವರ: ಕಾರಹುಣ್ಣಿಮೆ ಮುನ್ನಾದಿನ ಮಂಗಳವಾರ ಸಂಜೆ ಹೊನ್ನುಗ್ಗಿ ಹಬ್ಬವನ್ನು ಪಟ್ಟಣದಲ್ಲಿ ರೈತ ಕುಟುಂಬದವರು ನೆರೆಹೊರೆಯವರೊಡಗೂಡಿ ಜೀವನಾಡಿ ಎತ್ತುಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಹೊನ್ನುಗ್ಗಿ ಪ್ರಯುಕ್ತ ರೈತರು ಮನೆಯೊಳಗೆ ಎತ್ತುಗಳ ಮುಂಗಾಲನ್ನು ಕರಿ ಕಂಬಳಿ ಮೇಲೆ ನಿಲ್ಲಿಸಿ ಬಂಗಾರವನ್ನು ಎತ್ತಿನ ಕಾಲುಗಳಿಗೆ ಮುಟ್ಟಿಸಿ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಎತ್ತುಗಳ ಕೋಡುಗಳಿಗೆ ಚಕ್ಕುಲಿ, ಕೋಡಬಳಿ ಸರ ಕಟ್ಟಿ ಮುತ್ತೈದೆಯರನ್ನು ಕರೆದು ಆರತಿ ಮಾಡಿ ಪೂಜಿಸುತ್ತಾರೆ. ವರ್ಷವಿಡಿ ಹೊನ್ನುಗ್ಗಿ (ಬಂಗಾರ+ಹುಗ್ಗಿ)ಯಂತೆ ಫಸಲು ಕೈಸೇರಿ ವ್ಯವಸಾಯದಿಂದ ಹಸನಾದ ಬದುಕು ರೈತರದ್ದಾಗಲಿ ಎಂದು ಪ್ರಾರ್ಥಿಸುತ್ತಾರೆ. ಬಳಿಕ ಮನೆಯ ಎಲ್ಲ ಎತ್ತು- ಹಸುಗಳಿಗೂ ಅಕ್ಕಿಹುಗ್ಗಿ, ಜೋಳದ ಕಿಚಡಿ ಪ್ರಸಾದ ನೀಡುತ್ತಾರೆ. ಇದೇ ಪ್ರಸಾದವನ್ನು ನೆರೆಹೊರೆ, ಬಂಧು-ಬಾಂಧವರೊಡಗೂಡಿ ಸ್ವೀಕರಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net