

ಕಾರವಾರ: ಹೊನ್ನಾವರದಲ್ಲಿ ಗೋ ಹಂತಕರ ಮೇಲೆ ಗುಂಡಿನ ದಾಳಿ (Honnavara Shooting attack) ನಡೆಸಿದ ಪೊಲೀಸರ ಕ್ರಮದ ಬಗ್ಗೆ ಎಸ್‌ಡಿಪಿಐ ಸಂಘಟನೆ ಪ್ರಶ್ನೆ ಎತ್ತಿದೆ. ಅದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.
ಎಸ್‌ಡಿಪಿಐ ರಾಜ್ಯ ಅಧ್ಯಕ್ಷ ಅಬ್ದುಲ್ ಮಜೀದ್ ಅವರು ಈ ಸಂಬಂಧ ಸಿಎಂ ಅವರಿಗೆ ಪತ್ರ ಬರೆದಿದ್ದು, ಪೊಲೀಸ್ ತನಿಖೆಯ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ.
ಗೋ ಹತ್ಯೆ ಪ್ರಕರಣದಲ್ಲಿ ಬಂಧಿತನಾದ ಫೈಜಾನ್ ಎಂಬಾತ ಸ್ಥಳ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದು, ಆತನ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತರಬೇತಿ ಹೊಂದಿದ ಪೊಲೀಸರು ಅವರನ್ನು ಕೊಂಡೊಯ್ದಿರುವಾಗ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ..?, ಆತ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವಾಗ ಆತನನ್ನು ಗುಂಡು ಹಾರಿಸದೇ ಹಿಡಿಯಲಾರದಷ್ಟು ಶಕ್ತಿ ರಹಿತರಾದರೇ..?
ಸ್ಥಳ ಮಹಜರು ವೇಳೆ ಸ್ಥಳೀಯರು ಅಥವಾ ಪತ್ರಕರ್ತರು ಇರಬೇಕಲ್ಲವೇ..?, ಸ್ಥಳ ಮಹಜರಿನ ವಿಡಿಯೋ ಚಿತ್ರೀಕರಣ ಏಕೆ ಮಾಡಿಲ್ಲ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ನ್ಯಾಯಾಲಯ ಆರೋಪಿಯನ್ನು ಅಪರಾಧಿ ಎಂದು ಘೋಷಿಸುವ ಮುಂಚೆಯೇ ಪೊಲೀಸರು ನೀಡುತ್ತಿರುವ ಶಿಕ್ಷೆಯೇ..? ಇದು ಪೊಲೀಸ್ ರಾಜ್ಯವಾಗುತ್ತಿದೆಯೇ..? ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಬಿಜೆಪಿ ಎಸ್‌ಡಿಪಿಐ ನಿಲುವನ್ನು ತೀವ್ರವಾಗಿ ಖಂಡಿಸಿದೆ. ಪೊಲೀಸರ ಆತ್ಮ ಸ್ತೈರ್ಯ ಕುಂದಿಸುವ ಕೆಲಸ ಇದಾಗಿದೆ. ಪೊಲೀಸರ ಕ್ರಮ ಸರಿಯಾಗಿದೆ ಎಂದು ವಾದಿಸಿದೆ. ಬಿಜೆಪಿ ಕುಮಟಾ ಮುಖಂಡ ಎಂ.ಜಿ.ಭಟ್ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಜನವರಿ 18 ರಂದು ಹೊನ್ನಾವರ ಸಾಲ್ಕೋಡು ಕೊಂಡಾಕುಳಿ ಗ್ರಾಮದಲ್ಲಿ ಮೇಯಲು ಬಿಟ್ಟ ಗರ್ಭಿಣಿ ಹಸುವನ್ನು ಕೊಂದು, ಮಾಂಸವನ್ನು ಕೊಂಡೊಯ್ಯಲಾಗಿತ್ತು. ಅದರ ಹೊಟ್ಟೆಯಲ್ಲಿದ್ದ ಕರುವಿನ ಭ್ರೂಣವನ್ನು ಎಸೆದು ಹೋಗಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ ಇಬ್ಬರನ್ನು ಬಂಂಧಿಸಿತ್ತು. ಜ.25 ರಂದು ಒಬ್ಬ ಆರೋಪಿ ಪೈಜಾನ್‌ನನ್ನು ಸ್ಥಳ ಮಹಜರಿಗೆ ಕೊಂಡೊಯ್ದಾಗ ಆತ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿದೆ. ಈ ವೇಳೆ ನಾಲ್ವರು ಗಾಯಗೊಂಡಿದ್ದರು. ಈ ವೇಳೆ ಪೈಜಾನ್ ಕಾಲಿಗೆ ಗುಂಡು ಹಾರಿಸಿ (Honnavara Shooting attack) ಆತನನ್ನು ಬಂಧಿಸಲಾಗಿತ್ತು. ಇದೇ ತಿಂಗಳಲ್ಲಿ ನಡೆದ ಎರಡನೇ ಫೈರಿಂಗ್ ಘಟನೆ ಇದಾಗಿದೆ. ಹಿಂದೆ ಮುಂಡಗೋಡಿನಲ್ಲಿ ಫೈನಾನ್ಶಿಯರ್‌ನ ಅಪಹರಣ ಮಾಡಿ, ಹಣ ಕೇಳಿದ್ದ ಗ್ಯಾಂಗ್‌ನ ಒಬ್ಬ ವ್ಯಕ್ತಿಗೂ ಗುಂಡು ಹಾರಿಸಲಾಗಿತ್ತು. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯಸುನೀಲ ಹೆಗಡೆ ಗೋವಿನ ಜತೆ ಹಿಂದುಗಳು ಭಾವನಾತ್ಮಕ ಹಾಗೂ ಗೌರವದ ಸಂಬಂಧವನ್ನು ಹೊಂದಿದ್ದಾರೆ. ಹಿಂದುಗಳ ಶ್ರದ್ಧೆಯ ಗೋ ಮಾತಯ ಹತ್ಯೆ ಮಾಡಿದವರ ಮೇಲೆ ಪೊಲೀಸರು ಕೈಗೊಂಡ ಕ್ರಮ ಸರಿಯಾಗಿದೆ. ಗೋ ಹತ್ಯೆ ಮಾಡುವವರಿಗೆ ಇನ್ನಷ್ಟು ಕಠಿಣ ಶಿಕ್ಷೆಯಾಗಬೇಕು. ಇದನ್ನೂ ಓದಿ: https://www.vijayavani.net/transfer-essue-mla-sail-angry https://www.youtube.com/watch?v=WVsqKD5TMjA https://www.youtube.com/watch?v=WVsqKD5TMjA