ತಾಳಮದ್ದಳೆ ಪ್ರಸಂಗ ಸರಣಿ ಜು. 6ರಿಂದ

TAALMADDALE
Published on

ಹೊನ್ನಾವರ: ಕವಲಕ್ಕಿಯ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರೀರಾಮಾಯಣ ಕುರಿತ ತಾಳಮದ್ದಳೆ ಪ್ರಸಂಗ ಸರಣಿ ‘ರಾಮ, ರಾಮ, ಶ್ರೀರಾಮ ಪ್ರಸಂಗಗಳ ಭಾವ ಭಾಷಾ ವಿಲಾಸ’ ಕಾರ್ಯಕ್ರಮ ಜು. 6 ರಿಂದ 14ರವರೆಗೆ ಪ್ರತಿದಿನ ಸಂಜೆ 5 ರಿಂದ 8.30ರವರೆಗೆ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಭಟ್ಟ ಕಬ್ಬಿನಗದ್ದೆ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ಮಾಹಿತಿ ನೀಡಿದರು. ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಷಷ್ಟ್ಯಬ್ಧಿ ವೇಳೆ ಹುಟ್ಟಿದ ಸಂಸ್ಥೆಗೆ ಬೆಳ್ಳಿ ಹಬ್ಬದ ಸಂಭ್ರಮವಾಗಿದೆ. ಇದನ್ನು ಭಾವ ಭಾಷಾ ವಿಲಾಸದ ಮೂಲಕ ನಡೆಸುತ್ತಿದ್ದೇವೆ. ಶ್ರೀರಾಮ ಪಾತ್ರದಲ್ಲಿ ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ನಿರ್ವಹಿಸುವರು ಎಂದರು.
ಏಳು ಸ್ಥಳದಲ್ಲಿ 9 ಪ್ರಸಂಗ:
ಜುಲೈ 6ರಂದು ಮೊದಲ ದಿನದ ಕಾರ್ಯಕ್ರಮ ಹೊನ್ನಾವರ ಅಗ್ರಹಾರದ ಗಣಪತಿ ದೇವಸ್ಥಾನದಲ್ಲಿ ನಡೆಯಲಿದ್ದು, ಧರ್ಮದರ್ಶಿ ಡಾ. ಜಿ.ಜಿ. ಸಭಾಹಿತ, ಕೃಷ್ಣ ಯಾಜಿ ಬಳಕೂರು ಉದ್ಘಾಟಿಸುವರು. ಸಿದ್ದಾಶ್ರಮ- ಮಿಥಿಲೆ ಪ್ರಸಂಗ ನಡೆಯಲಿದ್ದು, ಹಿಮ್ಮೇಳದಲ್ಲಿ ಸರ್ವೇಶ್ವರ ಮುರೂರು, ಗಜಾನನ ಭಂಡಾರಿ, ಡಾ. ಜಿ.ಎಲ್. ಹೆಗಡೆ, ಬಾಲಕೃಷ್ಣ ಭಟ್ಟ, ಜಿ.ವಿ. ಹೆಗಡೆ, ಕೆ.ವಿ. ಹೆಗಡೆ, ಅಂಬಾ ಪ್ರಸಾದ ಐತಾಳ ಭಾಗವಹಿಸುವರು.
7ರಂದು ಕರ್ಕಿ ದೈವಜ್ಞ ಮಠದಲ್ಲಿ ಅಯೋಧ್ಯಾ ತಾಳಮದ್ದಳೆ. ಹಿಮ್ಮೇಳದಲ್ಲಿ ಶಂಕರ ಬ್ರಹ್ಮೂರು, ದತ್ತಾರಾಮ ಭಟ್ಟ, ವಿ. ಉಮಾಕಾಂತ ಭಟ್ ಕೆರೇಕೈ, ಗಣಪತಿ ಸಂಕದಗುಂಡಿ, ಲಕ್ಷ್ಮೀಕಾಂತ ಕೊಂಡದಕುಳಿ, ಸುಜಾತ ದಂಟಕಲ್ ಭಾಗವಹಿಸುವರು. 8ರಂದು ಗೋಕರ್ಣದ ಅಶೋಕೆಯಲ್ಲಿ ಮಧ್ಯಾಹ್ನ 1ರಿಂದ ಚಿತ್ರಕೂಟ ತಾಳಮದ್ದಲೆ. ಹಿಮ್ಮೇಳದಲ್ಲಿ ರಾಮಕೃಷ್ಣ ಹಿಲ್ಲೂರು, ಎನ್.ಜಿ. ಹೆಗಡೆ, ಪವನ ಕಿರಣಕೆರೆ, ಜಿ.ವಿ. ಹೆಗಡೆ, ಶಂಕರ ನೀಲ್ಕೋಡು ಭಾಗವಹಿಸುವರು.
9ರಂದು ಕೋಣಾರೆ ಮಹಾವಿಷ್ಣು ದೇವಸ್ಥಾನದಲ್ಲಿ ಪಂಚವಟಿ ತಾಳಮದ್ದಳೆ. ಸೃಜನ್ ಗುಂಡೂಮನೆ, ನೃಸಿಂಹ ಮುರೂರು, ಸವಿತಾ ಹಿರೇಮನೆ, ಸುಬ್ರಹ್ಮಣ್ಯ ಮೂರೂರು, ಚಂದ್ರಕಲಾ ಭಟ್ಟ ಭಾಗವಹಿಸುವರು.
10 ರಂದು ಕಿಷ್ಕಿಂದಾ ಪ್ರಸಂಗ ಮುರ್ಡೇಶ್ವರದ ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ. ಕೇಶವ ಹೆಗಡೆ ಕೊಳಗಿ, ಪರಮೇಶ್ವರ ಭಂಡಾರಿ, ವಾಸುದೇವ ರಂಗಾ ಭಟ್ಟ, ಡಾ. ಜಿ.ಕೆ.ಹೆಗಡೆ, ರಾಮಚಂದ್ರ ಕೊಂಡದಕುಳಿ ಭಾಗವಹಿಸುವರು.
11ರಂದು ಗೋಪಾಲಕೃಷ್ಣ ಜೋಗಿಮನೆ, ಪಿ.ಕೆ. ಹೆಗಡೆ ಹಿಮ್ಮೇಳದಲ್ಲಿ, ವಾಸುದೇವ ರಂಗಾ ಭಟ್ಟ, ಸೀತಾರಾಮ ಚಂದು, ನಾರಾಯಣ ಯಾಜಿ ಪಾಲ್ಗೊಳ್ಳುವರು. 12 ಹಾಗೂ 13ರಂದು ಮೇಲಿನ ಖರ್ವಾ ದೇವಸ್ಥಾನದಲ್ಲಿ ಸಾಕೇತ ಹಾಗೂ ತಮಸಾ ತೀರ ತಾಳಮದ್ದಳೆ. ಸರ್ವೇಶ್ವರ ಮುರೂರು, ಅನಂತ ಪಾಠಕ, ಅಂಬಾಪ್ರಸಾದ ಪಾತಾಳ, ಪ್ರಸಾದ ಭಟ್ಕಳ, ವಿ. ಪ್ರಸನ್ನ ಮಾಗೋಡು, ಪರಮೇಶ್ವರ ಭಂಡಾರಿ ವಿ. ಕೆರೇಕೈ, ಚಂದ್ರಕಲಾ ಭಟ್ಟ, ಶ್ರೀಧರ ಕಾಸರಕೋಡ ಭಾಗವಹಿಸುವರು. 14ರಂದು ಕರಿಕಾನ ಪರಮೇಶ್ವರಿ ದೇವಸ್ಥಾನದಲ್ಲಿ ಸರಯೂ ತೀರ ತಾಳಮದ್ದಲೆ. ಗೋಪಾಲಕೃಷ್ಣ ಜೋಗಿಮನೆ, ಪಿ.ಕೆ. ಹೆಗಡೆ, ರಾಧಾಕೃಷ್ಣ ಕಲ್ಚಾರ ಭಾಗವಹಿಸಲಿದ್ದಾರೆ ಎಂದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಎಸ್. ಶಂಭು ಭಟ್ಟ, ಡಾ. ಜಿ.ಜಿ.ಸಭಾಹಿತ, ಕೆ.ಜಿ.ಹೆಗಡೆ ಅಪ್ಸರಕೊಂಡ, ವಕೀಲ ಜಗದೀಶ ಭಟ್ಟ, ಎಸ್.ಜಿ. ಭಟ್ಟ, ಕೆ.ವಿ. ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net