ಅಡಕೆ, ಬಾಳೆತೋಟಕ್ಕೆ ಬೆಂಕಿ ಬಿದ್ದು ಹಾನಿ

hnr- fire
Published on

ಹೊನ್ನಾವರ: ತಾಲೂಕಿನ ಸಾಲ್ಕೋಡ ಗ್ರಾಮದ ಮುಲ್ಲೆಮಕ್ಕಿಯ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ತಂತಿಯಿಂದ ಹೊತ್ತಿಕೊಂಡ ಬೆಂಕಿಯು ಅಡಕೆ ಮತ್ತು ಬಾಳೆ ತೋಟಕ್ಕೆ ವ್ಯಾಪಿಸಿ ಹಾನಿಯಾದ ಘಟನೆ ಭಾನುವಾರ ನಡೆದಿದೆ.
ಸಾಲಕೋಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಲಚಂದ್ರ ನಾಯ್ಕ ಅವರ ತೋಟದ ಸಮೀಪದ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದೆ. ಮಧ್ಯಾಹ್ನದ ಸಮಯದಲ್ಲಿ ವಿದ್ಯುತ್ ಲೈನ್ ಕೆಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಗುಡ್ಡಕ್ಕೆ ವ್ಯಾಪಿಸಿತ್ತು. ಬಾಲಚಂದ್ರ ನಾಯ್ಕ ಅವರ ತೋಟಕ್ಕೂ ಬೆಂಕಿ ತಗುಲಿ ನೂರಕ್ಕೂ ಅಕ ಅಡಕೆ, ಬಾಳೆ ಗಿಡ ಹಾಗೂ ನೀರಾವರಿಗೆ ಹಾಕಿದ ಪೈಪಲೈನ್ ಸುಟ್ಟು ಕರಕಲಾಗಿವೆ. ಸಾರ್ವಜನಿಕರು ಅಗ್ನಿಶಾಮಕ ಇಲಾಖೆ ಮಾಹಿತಿ ನೀಡಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ವಿದ್ಯುತ್ ಲೈನ್‌ನಿಂದ ಪದೇಪದೆ ಇಂತಹ ಅಗ್ನಿ ಅವಘಡ ಸಂಭವಿಸುತ್ತಿವೆ. ಈ ಬಾರಿ ಬೆಂಕಿಯು ತೋಟದವರಿಗೂ ವ್ಯಾಪಿಸಿ ಹಾನಿಯುಂಟಾಗಿದೆ. ಹೆಸ್ಕಾಂ ಅಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net