

ಹೂವಿನಹಡಗಲಿ: ತಾಲೂಕಿನ ಬೂದನೂರು ಗ್ರಾಮದಲ್ಲಿ ಮಂಗಳವಾರ ಹೊನ್ನತ್ತೆಮ್ಮ ದೇವಿ ಜಾತ್ರೋತ್ಸವ ಅದ್ದೂರಿಯಾಗಿ ಜರುಗಿತು.
ಇದನ್ನೂ ಓದಿ:ಶ್ರೀ ಅಮರೇಶ್ವರ ಜಾತ್ರೋತ್ಸವಕ್ಕೆ ಭರದ ತಯಾರಿ
ಸಂಜೆ ವಿವಿಧ ಜನಪದ ವಾದ್ಯಮೇಳದೊಂದಿಗೆ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ಮಾಡಿ ಚೌತಿಮನೆೆ ಕಟ್ಟೆಯಲ್ಲಿ ಕುರಿಸಲಾಯಿತು. ನಂತರ ಗಟ್ಟಿಗಡಿಗಿ (ಕೇಲೋತ್ಸವ) ಒಂದೊತ್ತಿನವರ ವ್ರತಾಚರಣೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮಸ್ಥರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಬುಧವಾರ ಬೆಳಗಿನಜಾವ ಪ್ರಮುಖ ಬೀದಿಗಳಲ್ಲಿ ಹುಲುಸು (ಚರಗ) ಚೆಲ್ಲಿದರು.