10ಕ್ಕೆ ದಿಂಡಿ ಮಾಲಾಧಾರಿಗಳಿಗೆ ಸ್ವಾಗತ ಕಾರ್ಯಕ್ರಮ

SEVALAL download
Published on

ದಾವಣಗೆರೆ: ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ.13ರಿಂದ 15ರವರೆಗೆ ನಡೆಯಲಿರುವ ಸೇವಾಲಾಲ್ ಜಯಂತ್ಯುತ್ಸವಕ್ಕೆ ತೆರಳುವ ದಿಂಡಿ ಮಾಲಾಧಾರಿಗಳಿಗೆ ಇಲ್ಲಿನ ಕುಂದುವಾಡ ರಸ್ತೆಯ ಬಂಜಾರ ಭವನದಲ್ಲಿ ಫೆ.10ರ ಬೆಳಗ್ಗೆ 10ಕ್ಕೆ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪಾಲಿಕೆಯ ನೂತನ ಸದಸ್ಯರು, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ನಾಮನಿರ್ದೇಶನ ಸದಸ್ಯರು ಹಾಗೂ ದೂಡಾ ಸದಸ್ಯರನ್ನು ಇದೇ ವೇಳೆ ಸನ್ಮಾನಿಸಲಾಗುವುದು ಎಂದು ಬಂಜಾರ ಸಮಾಜದ ಮುಖಂಡ ಎಸ್. ನಂಜಾನಾಯ್ಕ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೂರಗೊಂಡನಕೊಪ್ಪದಲ್ಲಿ ನಡೆಯುವ ಸೇವಾಲಾಲ್ ಜಯಂತಿಗೆ 3-4 ಲಕ್ಷ ಜನರು ಸೇರಲಿದ್ದಾರೆ. ಫೆ.15ರಂದು ತಾಂಡಾಗಳಲ್ಲಿ ಭೋಗ್ ಕಾರ್ಯಕ್ರಮ ಆಯೋಜಿಸುವ ಸೂಚನೆ ಇದೆ ಎಂದರು. ಮುಖಂಡರಾದ ಮೋಹನ್‌ಕುಮಾರ್, ಎಲ್. ಕುಬೇರನಾಯ್ಕ, ಪಿ.ತಿಮ್ಮೇಶನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net