ಅಂಬೇಡ್ಕರ್ ನಿವಾಸದ ಮೇಲೆ ಹಾನಿ

hnl pratibhatane july 17
Published on

ಹೊನ್ನಾಳಿ: ಮಹಾರಾಷ್ಟ್ರದಲ್ಲಿ ಈಚೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ರಾಜಗೃಹದಲ್ಲಿ ಹೂವಿನ ಕುಂಡಗಳನ್ನು ದುಷ್ಕರ್ಮಿಗಳು ಹಾನಿಪಡಿಸಿರುವುದನ್ನು ಖಂಡಿಸಿ ಕರ್ನಾಟಕ ಮಾದಿಗ ದಂಡೂರು ತಾಲೂಕು ಸಮಿತಿ ಶುಕ್ರವಾರ ಪ್ರತಿಭಟನೆ ನಡೆಸಿತು.

ಕರ್ನಾಟಕ ಮಾದಿಗ ದಂಡೂರು ತಾಲೂಕು ಸಮಿತಿ ಅಧ್ಯಕ್ಷ ಜಿ.ಎಚ್.ತಮ್ಮಣ್ಣ ದಿಡಗೂರು ಮಾತನಾಡಿ, ಭಾರತದ ಸಂವಿಧಾನ ರಚನೆಗೆ ಅಭೂತಪೂರ್ವ ಕೆಲಸ ಮಾಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ನಿರಂತರ ಅಪಮಾನ ಮಾಡುವ ಕೃತ್ಯಗಳು ಇತ್ತೀಚೆಗೆ ನಡೆಯುತ್ತಿವೆ ಇಂಥ ಕೃತ್ಯವನ್ನು ಎಲ್ಲರೂ ಖಂಡಿಸಬೇಕು ಎಂದು ಹೇಳಿದರು.

ದುಷ್ಕರ್ಮಿಗಳನ್ನು ಸರ್ಕಾರ ತಕ್ಷಣ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ತುಷಾರ್ ಬಿ.ಹೊಸೂರು ಅವರಿಗೆ ಮನವಿ ಸಲ್ಲಿಸಿದರು.

ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜಪ್ಪ ಮಾರಿಕೊಪ್ಪ, ಮುಖಂಡರಾದ ಪರಮೇಶ್ವರಪ್ಪ, ಎಸ್.ಎಸ್.ಶ್ರೀನಿವಾಸ್, ಕತ್ತಿಗೆ ನಾಗರಾಜ್ ಇತರರಿದ್ದರು.

ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು, ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net