

ಹೊನ್ನಾಳಿ: ಇಲ್ಲಿನ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಮೂರು ಟ್ರಾೃಕ್ಟರ್ ಹಾಗೂ ಒಂದು ಟಿಪ್ಪರನ್ನು ಬುಧವಾರ ಪಟ್ಟಣದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿ ಪಡೆದು ಕಾರ್ಯಾಚರಣೆಗಿಳಿದ ಸಿಪಿಐ ಟಿ.ವಿ.ದೇವರಾಜ್ ಮತ್ತು ಸಿಬ್ಬಂದಿ, ತಾಲೂಕಿನ ಬೇಲಿಮಲ್ಲೂರು ಸಮೀಪ ಮೂರು ಟ್ರ್ಯಾಕ್ಟರ್ ಹಾಗೂ ಹೊಳೆ ಮಾದಾಪುರದ ಬಳಿ ಒಂದು ಟಿಪ್ಪರ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಇಬ್ಬರು ಟ್ರ್ಯಾಕ್ಟರ್ ಚಾಲಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಪಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗಳಾದ ದೊಡ್ಡ ಬಸಪ್ಪ, ಹರೀಶ್, ಪೈರೋಜ್‌ಖಾನ್, ಹೇಮರಾಜ್ ಇದ್ದರು.