ಅಭಿವೃದ್ಧಿ ಮಂತ್ರ, ಜನರ ನಿರೀಕ್ಷೆಯಂತೆ ಕೆಲಸ

dvg-beneficiary-17-1.jpg
Published on

ಹೊನ್ನಾಳಿ : ಅಭಿವೃದ್ಧಿ ಮತ್ತು ಸೇವೆ ಎಂಬ ಮಂತ್ರಗಳೊಂದಿಗೆ ಜನರ ನಿರೀಕ್ಷೆಯಂತೆ ಕೆಲಸ ಮಾಡಿದ್ದೇನೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
 ಪಟ್ಟಣದ ಖಾಸಗಿ ಲೇಔಟ್‌ನಲ್ಲಿ ಶುಕ್ರವಾರ, ತಾಲೂಕು ಆಡಳಿತದಿಂದ ಆಯೋಜಿಸಿದ್ದ 1933 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಕ್ಷೇತ್ರದಲ್ಲಿ 4500 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಇದೆಲ್ಲ ಸುಳ್ಳು ಎಂದಾದರೆ ರಾಜಕೀಯ ನಿವೃತ್ತಿ ಹೊಂದುವೆ ಎಂದು ತಿಳಿಸಿದರು.
 ನನ್ನ ಹೋರಾಟದ ಹಾದಿಯಲ್ಲಿ ಹಲವು ವಿಘ್ನಗಳು ಎದುರಾದವು. ಆದರೆ ಜನರ ರಕ್ಷಾ ಕವಚ ನನ್ನನ್ನು ಕಾಪಾಡಿದೆ. ಆ ಬಲ ಇರುವುದರಿಂದಲೇ ಯಾರಿಗೂ ಹೆದರುವುದಿಲ್ಲ. ಅವರು ಒಂದು ಹೆಜ್ಜೆ ಇಟ್ಟರೆ ನಾನು ನೂರು ಹೆಜ್ಜೆ ಮುಂದಿಡುವೆ ಎಂದರು.
 ಚುನಾವಣೆಯಲ್ಲಿ 25-30 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
 ಕರೊನಾ ಸಮಯದಲ್ಲಿ ಪ್ರಾಮಾಣಿಕವಾಗಿ ಸೋಂಕಿತರ ಸೇವೆ ಮಾಡುತ್ತಿದ್ದಾಗ ಮಾಜಿ ಶಾಸಕರು ನನ್ನ ಬಗ್ಗೆ ಲಘುವಾಗಿ ಮಾತನಾಡಿ, 80 ಲಕ್ಷ ರೂ. ಅವ್ಯವಹಾರ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದರು. ಅವರ ಬಳಿ ಈ ಬಗ್ಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
 ...
 ಬೋಗಸ್ ಕಾರ್ಡ್
 ಕಾಂಗ್ರೆಸ್ ಮುಖಂಡರು ಕೊಟ್ಟಿರುವುದು ಗ್ಯಾರಂಟಿ ಕಾರ್ಡ್ ಅಲ್ಲ ಅದೊಂದು ಬೋಗಸ್ ಕಾರ್ಡ್. ಇದಕ್ಕೆ ಮಾನ್ಯತೆ ಇಲ್ಲ. ಆದ್ದರಿಂದ ಆ ಕಾರ್ಡಿಗೆ ಬೆಂಕಿ ಹಚ್ಚಿ ಎಂದರು.
 2008ರಿಂದಲೂ ಇಂದಿನವರೆಗೆ ನಾಲ್ಕು ಬಾರಿ ‘ಇದು ನನ್ನ ಕೊನೇ ಚುನಾವಣೆ’ ಎಂದು ಹೇಳಿ ಮಾಜಿ ಶಾಸಕರು ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ, ಚುನಾವಣೆಯಿಂದ ಮಾತ್ರ ನಿವೃತ್ತಿ ಹೊಂದಲಿಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net