ಹೊನ್ನಾಳಿಯಲ್ಲಿ ವಿಶಿಷ್ಟವಾಗಿ ಬನ್ನಿ ಹಬ್ಬ ಆಚರಣೆ

hnl banni puje oct 26
Published on

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಾದ್ಯಂತ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಹಬ್ಬ ಆಚರಿಸಲಾಯಿತು.

ಹಿರೇಕಲ್ಮಠದಲ್ಲಿ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕಳೆದ 10 ದಿನಗಳ ಕಾಲ ಪೂಜಾ ಕೈಂಕರ್ಯದ ಜತೆಯಲ್ಲಿ ದೇವಿ ಪುರಾಣ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ಕೃಷಿ, ಪ್ರಕೃತಿ ಸೇರಿ ವಿವಿಧ ವಿಷಯ ಕುರಿತು ವಿಶೇಷ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ದೇವರ ಉತ್ಸವ ಮೂರ್ತಿಗಳ ಜತೆಗೆ ಸೋಮವಾರ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರನ್ನು ಕುಳ್ಳಿರಿಸಿ ಮೆರವಣಿಗೆ ಮಾಡಲಾಯಿತು. ವಾದ್ಯ ಮೇಳಗಳು ಪಾಲ್ಗೊಂಡಿದ್ದವು. ಮೆರವಣಿಗೆಯು ಪಟ್ಟಣ ಹೊರವಲಯದ ತುಮ್ಮಿನಕಟ್ಟೆ-ಬಲಮರಿ ರಸ್ತೆಯಲ್ಲಿರುವ ಬನ್ನಿಮಂಟಪಕ್ಕೆ ತೆರಳಿತು.

ನಂತರ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿ ಸಿಂಹೋಲ್ಲಂಘನೆಗೈದ ನಂತರ ಸ್ಥಳದಲ್ಲಿದ್ದ ಸಹಸ್ರಾರು ಭಕ್ತರು ಶ್ರೀಗಳಿಗೆ ಬನ್ನಿ ನೀಡಿ ಆಶೀರ್ವಾದ ಪಡೆದರು.

ಶ್ರೀಗಳಿಂದ ಬನ್ನಿ ಸ್ವೀಕರಿಸಿದ ಭಕ್ತರು, ಪಟ್ಟಣದ ದೇವದಾಯಗಳಿಗೆ ತೆರಳಿ ಬನ್ನಿಪತ್ರೆಯನ್ನು ದೇವರಿಗೆ ಅರ್ಪಿಸಿ ನಂತರ ಗುರು ಹಿರಿಯರು, ಸ್ನೇಹಿತರಿಗೆ ಬನ್ನಿ ಕೊಟ್ಟು ಬಾಳು ಬಂಗಾರವಾಗಲೆಂದು ಪರಸ್ಪರರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net