ಶ್ರೀ ನರಸಿಂಹಸ್ವಾಮಿ, ಮಂಜುನಾಥೇಶ್ವರ ರಥೋತ್ಸವ

HNL SUNKADAKATTE RATOTSAVA 12
Published on

ಹೊನ್ನಾಳಿ: ತಾಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ನರಸಿಂಹಸ್ವಾಮಿ ಹಾಗೂ ಮಂಜುನಾಥ ಸ್ವಾಮಿ ರಥೋತ್ಸವ ವೇದ-ಮಂತ್ರಘೋಷಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಬೆಳಗಿನ ಜಾವ ಅದ್ದೂರಿಯಾಗಿ ನೆರವೇರಿತು.

ಸೋಮವಾರ ನರಸಿಂಹಸ್ವಾಮಿ ರಥೋತ್ಸವಕ್ಕೆ ಕಂಕಣಧಾರಣೆ ಮಾಡಲಾಗಿತ್ತು. ಸಕಲ ವಾದ್ಯ-ಮೇಳದೊಂದಿಗೆ ಬುಧವಾರ ಹೂವಿನ ಉಚ್ಛಾಯ (ಬ್ರಹ್ಮರಥೋತ್ಸವ), ಗುರುವಾರ ಸಂಜೆ ಓಕುಳಿ, ಮಡೇವು ಸೇವೆ ನೆರವೇರಿದವು.

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಮತ್ತಿತರ ಜಿಲ್ಲೆಗಳಿಂದ ಉತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು.

ಕ್ಷೇತ್ರದ ವಿಶೇಷ: ಒಂದೇ ಗರ್ಭಗುಡಿಯಲ್ಲಿ ನರಸಿಂಹಸ್ವಾಮಿ ಹಾಗೂ ಮಂಜುನಾಥಸ್ವಾಮಿ ನೆಲೆಸಿರುವುದು ಇಲ್ಲಿನ ವಿಶೇಷ. ಈ ದೇವರಿಗೆ ಪ್ರತಿ ಸೋಮವಾರ ಹಾಗೂ ಶನಿವಾರ ವಿಶೇಷ ಅಭಿಷೇಕ, ಪೂಜೆ ನೆರವೇರಿಸಲಾಗುತ್ತದೆ.

ದೇವರೊಂದಿಗೆ ಭಕ್ತರ ಮಾತುಕತೆ: ಈ ದೇವಸ್ಥಾನಕ್ಕೆ ಬರುವ ಭಕ್ತರು ತಮ್ಮ ಸಂಕಷ್ಟವನ್ನು ದೇವರ ಬಳಿ ಹೇಳಿಕೊಳ್ಳುತ್ತಾರೆ. ಇದಕ್ಕೆ ಪ್ರತಿಯಾಗಿ ಬಲ, ಎಡ ಹೂವಿನ ಪ್ರಸಾದ ದೊರೆಯುತ್ತದೆ. ಬಲಗಡೆ ಪ್ರಸಾದ ಸಿಕ್ಕರೆ ಕಾರ್ಯಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆ. ಮದುವೆ, ಮನೆ ನಿರ್ಮಾಣ, ಉದ್ಯೋಗ ಅಲ್ಲದೆ ಯಾವುದಾದರೂ ಶುಭ ಕಾರ್ಯ ಕೈಗೊಳ್ಳುವ ಮುನ್ನ ಇಲ್ಲಿಗೆ ಬಂದು ಹೋಗುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net