ಧರ್ಮಸ್ಥಳ ಸಂಸ್ಥೆಯಿಂದ ನೆಮ್ಮದಿ ಬದುಕು

Honnali, Samavesha, Dharamsthala,
Published on

ಎಂ.ಬಿ ನಾಗರಾಜ್ ಕಾಕನೂರು ಹೇಳಿಕೆ I ಕೂಲಂಬಿಯಲ್ಲಿ ಪದಾಧಿಕಾರಿಗಳ ಸಮಾವೇಶ

ಹೊನ್ನಾಳಿ: ಧರ್ಮಸ್ಥಳ ಗ್ರಾವಿಮಣ ಸಂಸ್ಥೆಯ ಕಾರ್ಯಕ್ರಮಗಳಿಂದ ಗ್ರಾಮೀಣ ಜನರ ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದಾರೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಎಂ.ಬಿ ನಾಗರಾಜ್ ಕಾಕನೂರು ಹೇಳಿದರು.

ತಾಲೂಕಿನ ಕೂಲಂಬಿಯ ಶ್ರೀ ಗದ್ದಿಗೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಸವಾಪಟ್ಟಣ ಯೋಜನಾ ಕಚೇರಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸುಜ್ಞಾನ ನಿಧಿ ಶಿಷ್ಯವೇತನ, ಮದ್ಯವರ್ಜನ ಶಿಬಿರ, ವಾತ್ಸಲ್ಯ ಯೋಜನೆ ಮತ್ತಿತರ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ನಿಸ್ವಾರ್ಥವಾಗಿ ಸಮಾಜದ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದೆ ಎಂದರು.

ಸಮಾಜಮುಖಿ ಕಾರ್ಯಗಳಿಗೆ ಟೀಕೆ, ಟಿಪ್ಪಣಿಗಳು ಬಂದೇ ಬರುತ್ತವೆ. ಅವುಗಳನ್ನು ಮನಸ್ಸಿಗೆ ತೆಗೆದುಕೊಳ್ಳದೆ ಗುರಿಯತ್ತ ಗಮನ ಹರಿಸಬೇಕು ಎಂದರು.

ದಾವಣಗೆರೆಯ ಎಸ್‌ಬಿಐ ಬ್ಯಾಂಕಿನ ಆರ್ಥಿಕ ಸೇರ್ಪಡೆ ಪ್ರಬಂಧಕ ಮಾತನಾಡಿ, ಜನರು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಬದುಕು ಸಾಗಿಸುವಂತಾಗಬೇಕು ಎನ್ನುವ ದೃಷ್ಟಿಯಿಂದ ಧರ್ಮಸ್ಥಳ ಸಂಘವು ಸ್ವಸಹಾಯ ಸಂಘಗಳನ್ನು ರಚಿಸಿದೆ. ಆ ಸಂಘಗಳಿಗೆ ಆರ್ಥಿಕ- ಸಾಮಾಜಿಕ ತರಬೇತಿ ನೀಡುತ್ತ ಉಳಿತಾಯ ಮನೋಭಾವ ಬೆಳೆಸುತ್ತ ಆರ್ಥಿಕ ಶಿಸ್ತು ಕಲಿಸುತ್ತಿದೆ ಎಂದರು.

ಯೋಜನೆಯ ದಾವಣಗೆರೆ ಜಿಲ್ಲಾ ನಿರ್ದೇಶಕ ಲಕ್ಷ ್ಮಣ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮಗಳ ಮೂಲಕ ವ್ಯಕ್ತಿತ್ವ ವಿಕಸನ, ನಾಯಕತ್ವದ ಗುಣ ಬೆಳೆಯುತ್ತದೆ ಎಂದರು.

ಬಸವಪಟ್ಟಣ ಯೋಜನಾಧಿಕಾರಿ ನವೀನ್ ನಾಯ್ಕ, ದಾವಣಗೆರೆ ಎಂಐಎಸ್ ಯೋಜನಾಧಿಕಾರಿ ಶ್ರೀಧರ್, ದಾವಣಗೆರೆ ಎಸ್‌ಬಿಐನ ಆರ್‌ಬಿಒ ವ್ಯವಸ್ಥಾಪಕ ಸುಮನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net