ಒಳ ಮಾರ್ಗಗಳೂ ಬಂದ್

hnl road band may 2
ಹೊನ್ನಾಳಿ ಪಟ್ಟಣಕ್ಕೆ ಗ್ರಾಮೀಣ ಭಾಗದ ಜನರು ಬಂದು ಹೋಗುವ ಒಳ ಮಾರ್ಗಗಳನ್ನು ಬಂದ್ ಮಾಡಿರುವ ನಾಗರಿಕರು.
Published on

ಹೊನ್ನಾಳಿ: ಲಾಕ್‌ಡೌನ್ ಜಾರಿಯಾದ ದಿನದಿಂದ ಮುಖ್ಯ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿದ್ದು, ಗ್ರಾಮೀಣ ಭಾಗದ ಜನರು ದ್ವಿಚಕ್ರ ವಾಹನಗಳಲ್ಲಿ ಒಳ ರಸ್ತೆಗಳ ಮೂಲಕ ಪಟ್ಟಣಕ್ಕೆ ಬಂದು ಹೋಗುವುದು ಮಾತ್ರ ನಿಂತಿಲ್ಲ.

ಮುಖ್ಯ ರಸ್ತೆಗಳಲ್ಲಿ ಪೊಲೀಸರು ಪಟ್ಟಣಕ್ಕೆ ವಾಹನಗಳು ಬರದಂತೆ ತಡೆಯುತ್ತಿದ್ದಾರೆ. ಗ್ರಾಮೀಣ ಭಾಗದ ಜನ ಪಟ್ಟಣಕ್ಕೆ ಬರಲು ಮುಖ್ಯ ರಸ್ತೆಗಳ ಬದಲು ತಮ್ಮದೇ ದಾರಿಗಳನ್ನು ಕಂಡುಕೊಂಡಿದ್ದಾರೆ. ಹೀಗೆ ಬಂದವರು ತಮ್ಮ ಕೆಲಸಗಳನ್ನು ಮುಗಿಸಿಕೊಂಡು ಗ್ರಾಮಗಳಿಗೆ ವಾಪಸಾಗುತ್ತಿದ್ದಾರೆ.

ಇದರಿಂದ ಆತಂಕಗೊಂಡ ಪಟ್ಟಣದ ನಾಗರಿಕರು ಯಾರಿಂದಲಾದರೂ ಕರೊನಾ ಸೋಂಕು ಒಕ್ಕರಿಸಿದರೆ ಗತಿ ಏನು ಎಂದು ಅಂತಹ ರಸ್ತೆಗಳಿಗೆ ಅಡ್ಡಲಾಗಿ ಕಲ್ಲು ಮುಳ್ಳುಗಳನ್ನು ಅಡ್ಡ ಇಟ್ಟು ಸಂಚಾರ ಬಂದ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net