ಹೊನ್ನಾಳಿ ತಾಲೂಕಿನಲ್ಲಿ ಮಳೆಯಿಂದ 2.59 ಕೋಟಿ ರೂ. ನಷ್ಟ

NMT RAIN 18
Published on

ಹೊನ್ನಾಳಿ: ಕಳೆದ ಹದಿನೈದು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದ ತಾಲೂಕಿನಾದ್ಯಂತ 352 ಹೆಕ್ಟೇರ್ ಮೆಕ್ಕೆಜೋಳ, ಅಂಗನವಾಡಿ ಹಾಗೂ ಕೆಲ ರಸ್ತೆಗಳು ಹಾಳಾಗಿದ್ದು, 2.59 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಹಸೀಲ್ದಾರ್ ಜೆ.ಎಚ್.ರಶ್ಮಿ ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್ ಅಂದಾಜಿನಂತೆ ಪ್ರತಿ ಹೆಕ್ಟೇರ್‌ಗೆ 1350 ರೂ.ನಂತೆ 352 ಹೆಕ್ಟೇರ್‌ಗೆ 47 ಲಕ್ಷ ರೂ. ಪಂಚಾಯತ್‌ರಾಜ್ ಇಲಾಖೆಯ 4 ಕಿಮೀ ರಸ್ತೆ ಹಾಳಾಗಿದ್ದು, 20 ಲಕ್ಷ ರೂ. ನಷ್ಟ ಉಂಟಾಗಿದೆ. 8 ಅಂಗನವಾಡಿ ಕಟ್ಟಡಗಳು ಕುಸಿದಿದ್ದು, 1.24 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾಳಜಿ ಕೇಂದ್ರ ಸ್ಥಾಪನೆ ಮಾಡಿ ಸಂತ್ರಸ್ತರಿಗೆ ಉಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಚೀಲೂರು ಹಾಗೂ ಸಾಸ್ವೇಹಳ್ಳಿಯಲ್ಲೂ ಕಾಳಜಿ ಕೇಂದ್ರ ತೆರೆಯಲಾಗಿತ್ತು. ಆದರೆ, ನೀರಿನ ಪ್ರಮಾಣ ತಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ಕೇಂದ್ರಕ್ಕೆ ಬರಲಿಲ್ಲ. ತೋಟಗಾರಿಕೆ ಬೆಳೆಗಳು ಹಾನಿಯಾಗಿರುವ ಬಗ್ಗೆ ಜಂಟಿ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ನ್ಯಾಮತಿ ವಿವಿಧೆಡೆ ಮನೆಗಳಿಗೆ ಹಾನಿ

ನ್ಯಾಮತಿ ತಾಲೂಕಿನಾದ್ಯಂತ ಸತತ ಮಳೆಯಿಂದಾಗಿ ಸುರಿದ ಮಳೆಯಿಂದಾಗಿ ಭಾನುವಾರ ತಾಲೂಕಿನ ಸುರಹೊನ್ನೆ, ಫಲವನಹಳ್ಳಿ, ಕೊಡಚಂಗೊಂಡನಹಳ್ಳಿ, ಗ್ರಾಮದಲ್ಲಿ ಒಂದೊಂದು ಗೋಡೆಗಳು ಭಾಗಶಃ ಹಾನಿಯಾಗಿರಿವುದಾಗಿ ತಹಸೀಲ್ದಾರ್ ಎಂ.ರೇಣುಕಾ ತಿಳಿಸಿದ್ದಾರೆ.

ಮಳೆ ವಿವರ: ಸವಳಂಗ-18.0, ಬೆಳಗುತ್ತಿ-19.2, ಹರಳೇಹಳ್ಳಿ-18,2, ಗೋವಿನಕೋವಿ-19.4 ಮಿಮೀ ಮಳೆ ಬಿದ್ದ ವರದಿ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net