ಹೊನ್ನಾಳಿ-ನ್ಯಾಮತಿ ತಾಲೂಕಲ್ಲಿ ಅಭಿವೃದ್ಧಿ ನಿರಂತರ

honnali, Nyamathi,
Published on

ಹೊನ್ನಾಳಿ: ಹೊನ್ನಾಳಿ, ನ್ಯಾಮತಿ ತಾಲೂಕುಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿರುತ್ತವೆ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಸೊರಟೂರು ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಬೀರಲಿಂಗೇಶ್ವರ ಸಮುದಾಯ ಭವನಕ್ಕೆ ಶಂಕಸ್ಥಾಪನೆ ನೆರವೇರಿಸಿ ಮಾತನಾಡಿ, ಎರಡು ತಾಲೂಕಿನ ಜನರ ಬೇಡಿಕೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದೇನೆ ಎಂದರು.

ಸೊರಟೂರು ಗ್ರಾಮದ ಪ್ರತಿ ಸಿಸಿ ರಸ್ತೆಯನ್ನು ಮಾಡಿಸಿದ್ದು, ಕೆರೆಗಳ ಅಭಿವೃದ್ಧಿಗೆ ಒಂದೂವರೆ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಹೊನ್ನಾಳಿಯಲ್ಲಿ ನೂರು ಹಾಸಿಗೆ ಆಸ್ಪತ್ರೆ ಇತ್ತು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರಿಂದ ಸಿಎಂ ಬೊಮ್ಮಾಯಿ ಅವರು 250 ಹಾಸಿಗೆಯ ಆಸ್ಪತ್ರೆ ಮಂಜೂರು ಮಾಡಿಸಿಕೊಟ್ಟರು. ಹೊನ್ನಾಳಿ- ನ್ಯಾಮತಿ ತಾಲೂಕಿನಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಮುಗಿಯುವ ಹಂತದಲ್ಲಿದೆ ಎಂದರು.

ಉಪಾಧ್ಯಕ್ಷೆ ನಾಗರತ್ನ ಬಾಯಿ, ಸದಸ್ಯರಾದ ಕೆ. ಮರಿಯಪ್ಪ, ಹನುಮಂತಪ್ಪ, ಪರಶುರಾಂ, ರಂಜಿತಾ, ದೊಡ್ಡಪ್ಪ, ಎಚ್. ಹುಚ್ಚಪ್ಪ, ಹನುಮಂತಪ್ಪ, ಹರೀಶ್, ಶಾಂತಪ್ಪ, ದೊಡ್ಡೇಶಪ್ಪ, ಡಿ.ಹನುಮಂತಪ್ಪ, ಬಸವರಾಜಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net