ಮತ್ತೊಮ್ಮೆ ಗುಂಪು ಘರ್ಷಣೆ ನಡೆಯಬಾರದು

Davanagere Honnali, Kundur, Peace, Meeting,
Published on

ಹೊನ್ನಾಳಿ: ತಾಲೂಕಿನ ಕುಂದೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದಿದ್ದ ಗಲಾಟೆ ಹಿನ್ನೆಲೆಯಲ್ಲಿ ಶನಿವಾರ ಕುಂದೂರು ಗ್ರಾಮದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಶಾಂತಿ ಸಭೆ ಜರುಗಿತು.

ನನ್ನ ಗ್ರಾಮದಲ್ಲಿ ಗುಂಪು ಘರ್ಷಣೆ ನಡೆದಿರುವುದು ವಿಷಾದನೀಯ. ಇನ್ಮುಂದೆ ಇಂತಹ ಘಟನೆಗಳು ನಡೆಯದಂತೆ ನಾವೆಲ್ಲರೂ ಮುನ್ನೆಚರಿಕೆ ವಹಿಸೋಣ. ಈ ಘಟನೆ ಸುತ್ತಲಿನ ಗ್ರಾಮಗಳಿಗೂ ಹರಡುವುದು ಬೇಡ ಎಂದು ಹೇಳಿದರು.

ಸಿಪಿಐ ದೇವರಾಜ್ ಮಾತನಾಡಿ, ತಾಲೂಕಿನ ಯಾವುದೇ ಗ್ರಾಮಗಳಲ್ಲೂ ಗುಂಪು ಘರ್ಷಣೆಯಾದ ವರದಿ ಇಲ್ಲ. ಆದರೆ, ಈ ಗ್ರಾಮದಲ್ಲಿ ಕೆಲವು ಬಾರಿ ಕೋಮು ಸಂಘರ್ಷ ಉಂಟಾಗಿದೆ ಎಂದರು.

ತಹಸೀಲ್ದಾರ್ ತುಷಾರ್ ಬಿ.ಹೊಸೂರ್, ಪಿಎಸ್‌ಐ ತಿಪ್ಪೇಸ್ವಾಮಿ, ಮುಖಂಡರಾದ ಶಿವಣ್ಣ, ವಿಕ್ರಂಪಾಟೀಲ್, ಶೇಖರಪ್ಪ, ಉಮೇಶ್, ಜಗದೀಶ್, ಸಾದಿಕ್, ನಹಿಮ್‌ಪಾಷ್, ಶಫಿ ಉಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net