ಲಕ್ಷ್ಮೀ ಶೋಭಾನೆ ವಾಚನ

HNL KOTE 13.jpg (1)
Published on

ಹೊನ್ನಾಳಿ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮಠದ ಆನಂದತೀರ್ಥ ಭವನದಲ್ಲಿ ಜ್ಞಾನಭಾರತಿ ಮಾತೃಮಂಡಳಿಯ 25ನೇ ವಾರ್ಷಿಕೋತ್ಸವ ಅಂಗವಾಗಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಅಲಂಕಾರ, ಲಕ್ಷ್ಮೀ ಶೋಭಾನೆ ಧಾರ್ಮಿಕ ಕಾರ್ಯಕ್ರಮ ಗುರುವಾರ ನಡೆಯಿತು.

ಶ್ರೀ ವಾದಿರಾಜಸ್ವಾಮಿಗಳಿಂದ ರಚಿಸಲ್ಪಟ್ಟ ಲಕ್ಷ್ಮೀ ಶೋಭಾನೆಯನ್ನು ಮಾತೃಮಂಡಳಿ ಸದಸ್ಯರು ವಾಚಿಸಿದರು. ಸಂಸ್ಕೃತ ವಿದ್ವಾಂಸ ಶ್ರೀ ಕೃಷ್ಣಮೂರ್ತಿ ಜೋಯ್ಸ, ವಿಠಲ್‌ರಾವ್ ಹಾಗೂ ಪಂಡಿತ ರಘುನಂದನ ಆಚಾರ್ ದಂಪತಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಮಾತೃಮಂಡಳಿಯ ಲಲಿತಾ ಸತೀಶ್ ಭಾರ್ಗವ್, ಶ್ರೀನಿವಾಸ್‌ಮೂರ್ತಿ, ಸುಮಾ ಶ್ರೀನಾಥ್, ಸರಸ್ವತಿ, ಪಲ್ಲವಿ ರಾಘು, ಸುಷ್ಮಾ ಗಿರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net