ದೇಗುಲಗಳಲ್ಲಿ ಭೀಮನ ಅಮಾವಾಸ್ಯೆ ಪೂಜೆ

Honnali, Hirekal Math,
Published on

ಹೊನ್ನಾಳಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ದೇವಾಲಯಗಳಲ್ಲಿ ಸೋಮವಾರ ಭೀಮನ ಅಮಾವಾಸ್ಯೆಯ ವಿಶೇಷ ಪೂಜೆ ಸಲ್ಲಿಸಲಾಯಿತು. ಸಾವಿರಾರು ಭಕ್ತರು ದರ್ಶನ ಪಡೆದರು.

ಪಟ್ಟಣದ ಹಿರೇಕಲ್ಮಠದಲ್ಲಿರುವ ವೀರಭದ್ರೇಶ್ವರ ಹಾಗೂ ಶ್ರೀಗಳ ಗದ್ದಿಗೆಗಳಿಗೆ ಪೂಜೆ ಸಲ್ಲಿಸಲಾಯಿತು. ಸುಂಕದಕಟ್ಟೆಯ ನರಸಿಂಹಸ್ವಾಮಿ, ಮಂಜುನಾಥ ಮತ್ತು ಮಾರಿಕೊಪ್ಪ ಗ್ರಾಮದ ಹಳದಮ್ಮ ದೇಗುಲಗಳಲ್ಲಿ ಭಕ್ತರು ದೇವಿ ದರ್ಶನ ಪಡೆದರು.

ಮನೆಗಳಲ್ಲಿ ದೀಪಸ್ಥಂಭ, ಗೌರಿಪೂಜೆ: ಮಹಿಳೆಯರು ಮನೆಗಳಲ್ಲಿ ದೀಪಸ್ಥಂಭ ಸ್ಥಾಪನೆ ಮಾಡಿ, ಗೌರಿ ಪೂಜೆ ಸಲ್ಲಿಸಿದರು. ಬಳಿಕ ಮನೆಯ ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು.

ದಕ್ಷಿಣಾಯಾನ ಪರ್ವ ಕಾಲವಾದ್ದರಿಂದ ಇಲ್ಲಿನ ತುಂಗಭದ್ರಾ ನದಿಯಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net