ತಾರಸಿ ಮೇಲೆ ಬೆಳೆದಿದ್ದ ಗಾಂಜಾ ವಶ

download
Published on

ದಾವಣಗೆರೆ: ಹೊನ್ನಾಳಿ ತಾಲೂಕು ಕತ್ತಿಗೆ ಗ್ರಾಮದಲ್ಲಿ ವಾಸದ ಮನೆಯ ಮೇಲೆ ಬೆಳೆದಿದ್ದ ೫೫೦೦ ರೂ.ಮೌಲ್ಯದ ೫೧ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಮೇಶಪ್ಪ ಎಂಬುವರ ಆರ್‌ಸಿಸಿ ಮನೆಯ ತಾರಸಿ ಮೇಲೆ ಪ್ಲಾಸ್ಟಿಕ್ ಕುಂಡಗಳಲ್ಲಿ ೧೦೯ ಸೆಂಟಿ ಮೀಟರ್ ಅಳತೆಯ ೨೧ ಹಾಗೂ ೯ ಸೆಂಟಿ ಮೀಟರ್ ಅಳತೆಯ ೩೦ ಸೇರಿ ೫೧ ಗಾಂಜಾ ಗಿಡಗಳನ್ನು ಬೆಳೆಸಲಾಗಿದೆ ಎಂಬ ಖಚಿತ ಮಾಹಿತಿ ಆಧರಿಸಿ ಅಬಕಾರಿ ಪೊಲೀಸರು ದಾಳಿ ಮಾಡಿದ್ದರು.

ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಸಾದ್ ಪತ್ರಿಕಾ ಹೇಳಿಕೆಯಲ್ಲಿ ಬುಧವಾರ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಎಸ್.ಆರ್ ಮುರುಡೇಶ್, ಉಪ ನಿರೀಕ್ಷಕ ಅಶೋಕ್ ಬಸವರಾಜ ನಾವಿ, ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net