ಕಾಲೇಜಿನ ಎಲೆಕ್ಟ್ರಾನಿಕ್ ಉಪಕರಣ ಕದ್ದಿದ್ದ ಇಬ್ಬರು ಕಳ್ಳರ ಬಂಧನ

Honnali, electronic equipment, theft case,
Published on

ಹೊನ್ನಾಳಿ: ತಾಲೂಕಿನ ಕುಂದೂರು ಕೂಲಂಬಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳವಾಗಿದ್ದ 84 ಸಾವಿರ ರೂ. ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೊನ್ನಾಳಿ ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕುಂದೂರು ಗ್ರಾಮದ ಆಂಜನೇಯ ಹಾಗೂ ಆಕಾಶ ಅವರನ್ನು ಬಂಧಿತ ಆರೋಪಿಗಳು. ಇತ್ತೀಚೆಗೆ ಕಾಲೇಜಿನಲ್ಲಿದ್ದ ಲೆನೋವಾ ಲ್ಯಾಪ್‌ಟಾಪ್, ಡಿಜಿಟಲ್ ಪ್ರಾಜಕ್ಟರ್, ಯುಪಿಎಸ್ ಬ್ಯಾಟರಿ ಸೇರಿ ಒಟ್ಟು 84 ಸಾವಿರ ರೂ. ಮೌಲ್ಯದ ಉಪಕರಣ ಕಳುವಾಗಿದ್ದವು. ಈ ಕುರಿತು ಕಾಲೇಜಿನ ಸಿಬ್ಬಂದಿ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ತನಿಖೆ ಕೈಗೊಂಡ ಡಿವೈಎಸ್‌ಪಿ ಡಾ. ಸಂತೋಷ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದೇಗೌಡ, ಪಿಎಸ್‌ಐ ಸಿದ್ದಪ್ಪ ಹಾಗೂ ಸಿಬ್ಬಂದಿ ಒಳಗೊಂಡ ತಂಡ ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದರು.

ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಬಂಧಿತರಿಂದ ಎಲ್ಲ ಉಪಕರಣ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಂಡದಲ್ಲಿ ಎಎಸ್‌ಐ ಪರಶುರಾಮಪ್ಪ, ಸಿಬ್ಬಂದಿ ರಾಜು, ಧರ್ಮಪ್ಪ, ಚೇತನ್‌ಕುಮಾರ್, ಜಗದೀಶ್, ವಿಕ್ರಮ್, ಮಂಜುನಾಥ್, ರಂಗನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net