ಬದುಕು ಕಟ್ಟಿಕೊಳ್ಳುವ ಸಲುವಾಗಿ ದೇಗುಲ ನಿರ್ಮಾಣ

03 NMT 2
Published on

ನ್ಯಾಮತಿ: ದೇವರ ಎದುರಿನಲ್ಲಿ ಬದುಕು ಕಟ್ಟಿಕೊಳ್ಳುವ ಸದುದ್ದೇಶದಿಂದ ದೇವಸ್ಥಾನಗಳು ನಿರ್ವಣವಾಗುತ್ತಿವೆ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಕುರುವ ಗ್ರಾಮದ ಶ್ರೀ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ಸ್ವಾಮಿ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮತ್ತು ಕಳಸಾರೋಹಣದ ಧರ್ಮಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ದೇವಾಲಯದಲ್ಲಿದ್ದರೆ ಚಿಂತನೆಗೆ ಅವಕಾಶ ಸಿಗುತ್ತದೆ, ಮನೆಯಲ್ಲಿದ್ದರೆ ಚಿಂತೆ ಬಾಧಿಸುತ್ತದೆ ಎಂದು ಭಾವಿಸುವ ಭಕ್ತರು ಪರಮಾತ್ಮ ಸರ್ವವ್ಯಾಪಿಯಾಗಿರುತ್ತಾನೆ ಎಂಬ ಸಂಗತಿಯನ್ನೇ ಮರೆತಿದ್ದಾರೆ. ಒಳ್ಳೆಯದನ್ನು ಭಾವಿಸಿಕೊಂಡಾಗ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.

ಕುಟುಂಬದ ಜವಾಬ್ದಾರಿ ನಿಭಾಯಿಸುವ ತಾಯಂದಿರಿಗೆ ಸರ್ಕಾರ ಹೆಚ್ಚಿನ ಸೌಲಭ್ಯ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ತಿಳಿಸಿದರು.

ತಾಲೂಕಿನ ಗೋವಿನಕೋವಿ ಹಿರೇಮಠದ ಶಿವಯೋಗಿ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಪಟ್ಟಾಧಿಕಾರವಾಗಿ ಒಂದು ವರ್ಷವಾಗಿದು, ಪಟ್ಟಾಧಿಕಾರದ ನಂತರ ಕಳಸಾರೋಹಣ ನೋಡಬೇಕೆಂಬ ಪ್ರತೀತಿಯಿದೆ. ಮೊದಲು ರಾಂಪುರ ಬೃಹನ್ಮಠದ ರಥೋತ್ಸವದ ಕಳಸದ ದರ್ಶನ ಭಾಗ್ಯ ಒದಗಿ ಬಂದಿದ್ದು, ಇದೀಗ ಗ್ರಾಮದ ಕಳಸಾರೋಹಣವನ್ನು ಕಣ್ತುಂಬಿಕೊಳ್ಳುವಂತಾಯಿತು ಎಂದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ತಾಲೂಕಿನ ಮಠ-ಮಾನ್ಯಗಳು ಮತ್ತು ತುಂಗಭದ್ರಾ ನದಿಯಿಂದ ಜಿಲ್ಲೆಯ ಎಲ್ಲ ತಾಲೂಕುಗಳಿಗಿಂತ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕು ಸಮೃದ್ಧವಾಗಿವೆ. ಈವರೆಗೆ 150 ಕೆರೆಗಳಿಗೆ ನೀರು ತುಂಬಿಸುವ ವ್ಯವಸ್ಥೆಯಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬಹುತೇಕ ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗಿದೆ ಎಂದು ತಿಳಿಸಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲೂ ಧರ್ಮ ಬಹಳ ಮುಖ್ಯ. ಧರ್ಮದ ತಳಹದಿಯ ಮೇಲೆ ಜೀವನ ರೂಪಿಸಿಕೊಂಡಾಗ ಏನನ್ನಾದರೂ ಸಾಧಿಸಲು ಸಾಧ್ಯವಿದೆ. ನಾಡಿನ ತಾಯಂದಿರಿಂದ ಧರ್ಮ ಸಂಸ್ಕೃತಿ ಉಳಿದಿದೆ ಎಂದು ಹೇಳಿದರು.

ಕುರುವ ಪರಮೇಶ್ವರಪ್ಪ ಮಾತನಾಡಿದರು. ದಿಡಗೂರಿನ ಅಣ್ಣಪ್ಪ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯದರ್ಶಿ ಎಚ್.ವಿ. ಸತೀಶ್, ಮಹೇಶ್ವರಪ್ಪ, ಫಾಲಾಕ್ಷಪ್ಪ, ಸುರೇಶಪ್ಪ, ಲಿಂಗಮೂರ್ತಪ್ಪ, ಗ್ರಾಪಂ ಸದಸ್ಯ ದಾನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net