ಬಡವರ ಹಿತ ಕಾಯುವ ಪ್ಯಾಕೇಜ್‌ಗೆ ವಿರೋಧ ಬೇಡ

Davanagere honnali, bannikod, food kit, delivery,
Published on

ಹೊನ್ನಾಳಿ: ಎಲ್ಲ ವರ್ಗಗಳ ಹಿತ ಕಾಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೆಗಾ ಪ್ಯಾಕೇಜ್‌ಗೆ ವಿನಾ ಕಾರಣ ವಿರೋಧಿಸದೆ ಸಹಕಾರ ನೀಡುವಂತೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ತಾಲೂಕಿನ ಬನ್ನಿಕೋಡು ಗ್ರಾಪಂ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಭಾನುವಾರ ಆಹಾರ ಕಿಟ್ ವಿತರಿಸಿ ಮಾತನಾಡಿ, ಕರೊನಾದಂತಹ ಸಮಯದಲ್ಲಿ ಯಾರೂ ರಾಜಕೀಯ ಮಾಡಬಾರದೆಂದರು.

ಬಡವರಿಗೆ ಸ್ವಂತ ಖರ್ಚಿನಲ್ಲಿ ಆಹಾರ ಕಿಟ್ ನೀಡುತ್ತಿದ್ದೇನೆಯೇ ಹೊರತು ಸರ್ಕಾರದ ಅನುದಾನ ಅಥವಾ ದೇಣಿಗೆ ಪಡೆದಿಲ್ಲ. ಕೆಲವರು ಇದೇ ವಿಷಯವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಬೇಸರಿಸಿದರು.

ಲಾಕ್‌ಡೌನ್ ಆದಾಗಿನಿಂದ ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕುಗಳಲ್ಲಿ ಪ್ರತಿನಿತ್ಯ ಮೂರ‌್ನಾಲ್ಕು ಸಾವಿರ ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಅನಾರೋಗ್ಯಕ್ಕೆ ತುತ್ತಾದವರಿಗೆ ಔಷಧ, ಮಾಸ್ಕ್ ನೀಡಲಾಗುತ್ತಿದೆ ಎಂದರು.

ಜಿಪಂ ಸದಸ್ಯೆ ದೀಪಾ ಜಗದೀಶ್, ತಹಸೀಲ್ದಾರ್ ತುಷಾರ್ ಬಿ.ಹೊಸೂರ್, ಸುಮಾ ರೇಣುಕಾಚಾರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net