ಬೆಂಕಿ ಅನಾಹುತಕ್ಕೆ ಮೂರು ಮನೆಗಳು ಭಸ್ಮ

Honnali, accidental fire, accident,
Published on

ದಾವಣಗೆರೆ: ಶನಿವಾರ ತಡರಾತ್ರಿ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದಲ್ಲಿ ಬೆಂಕಿ ಅನಾಹುತಕ್ಕೆ ಮೂರು ಮನೆಗಳು ಭಸ್ಮಗೊಂಡು, ಮನೆ ಪರಿಕರ ಸೇರಿದಂತೆ ಒಂದು ಜಾನುವಾರು ಸಾವನ್ನಪ್ಪಿದೆ.

ಮಾಸಡಿಯ ಚಂದ್ರಮ್ಮ-ರಾಜಪ್ಪ, ಗಂಗಮ್ಮ-ಹಾಲಪ್ಪ, ಶಿವಮ್ಮ-ಪರಸಪ್ಪ ಅವರ ಮನೆಗಳು ಬೆಂಕಿಗೆ ಆಹುತಿಯಾಗಿವೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕೆ ಭೇಟಿ ನೀಡಿದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮನೆ ಕಳೆದುಕೊಂಡ ಮೂರು ಕುಟುಂಬಗಳಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಧನ ಸಹಾಯ, ಧಾನ್ಯ, ಬಟ್ಟೆ ನೀಡುವ ಮೂಲಕ ಮಾನವೀಯತೆ ಮೆರೆದರು.

ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್, ಗ್ರಾಮಸ್ಥರಾದ ಹನುಮಂತಪ್ಪ, ಹನುಮಂತ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net