ಆರ್‌ಸಿಬಿಗೆ ಹಾಂಗ್ಯೋ ಐಸ್‌ಕ್ರೀಮ್ ಪಾಲುದಾರ

Hangyo
Published on

ಭಟ್ಕಳ: ಐಸ್‌ಕ್ರೀಮ್ ಕ್ಷೇತ್ರದಲ್ಲಿ ಮೋಡಿ ಮಾಡಿರುವ ಕರಾವಳಿಯ ಹಾಂಗ್ಯೋ ಐಸ್‌ಕ್ರೀಮ್ ಈಗ ಕ್ರಿಕೆಟ್ ಪ್ರಿಯರ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದರ ಅಧಿಕೃತ ಐಸ್‌ಕ್ರೀಮ್ ಪಾಲುದಾರನಾಗಿ ಸೇರ್ಪಡೆಯಾಗಿದೆ.

ಐಪಿಎಲ್ 2024ಕ್ಕೆ ರಾಯಲ್ ಚಾಲೆಂಜರ್ಸ್‌ ಜತೆ ಹಾಂಗೋ ಐಸ್‌ಕ್ರೀಮ್ ಹೊಸ ಹೆಜ್ಜೆಯನ್ನಿಡಲಿದೆ. ಬೆಂಗಳೂರಿನಲ್ಲಿ ಈ ಕುರಿತ ಒಡಂಬಡಿಕೆಗೆ ಎರಡೂ ಸಂಸ್ಥೆಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ. ಕರ್ನಾಟಕ ಕರಾವಳಿಯ ಐಸ್‌ಕ್ರೀಮ್ ಕ್ರಿಕೆಟ್ ಮ್ಯಾಜಿಕ್ ತಂಡದೊಂದಿಗೆ ಸೇರಿಕೊಂಡಿರುವ ಅಮೃತ ಗಳಿಗೆಯಿದು. ಇದು ಮೈದಾನದ ಒಳ-ಹೊರಗೆ ಹೊಸ ಉತ್ಸಾಹ, ಸಂತಸ ಪಸರಿಸುವುದಂತೂ ಗ್ಯಾರಂಟಿ. ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿಯ ಪ್ರತಿಯೊಂದು ಪಂದ್ಯಗಳೂ ಕ್ರಿಕೆಟ್ ಮತ್ತು ಐಸ್‌ಕ್ರೀಮ್‌ನ ಮನಸೂರೆಗೊಳ್ಳುವ ಹಬ್ಬವಾಗಿ ಪರಿವರ್ತನೆಯಾಗಲಿದೆ.

ಕ್ರಿಕೆಟ್‌ನ ಹಷೋತ್ಕರ್ಷ ಮತ್ತು ಐಸ್‌ಕ್ರೀಮ್‌ನ ಸಿಹಿಯ ಆಹ್ಲಾದಕರ ಸಮ್ಮಿಲನ ಪ್ರೇಕ್ಷಕರಿಗೆ ಹೊಸ ಅನುಭೂತಿ ನೀಡಲಿದೆ. ಐಪಿಎಲ್ 2024ರ ಋತುವಿನಲ್ಲಿ, ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ (ಆರ್‌ಸಿಬಿ) ಅಧಿಕೃತ ಐಸ್‌ಕ್ರೀಮ್ ಪಾಲುದಾರನಾಗಿ ಹಾಂಗ್ಯೋ ಐಸ್‌ಕ್ರೀಮ್ ತನ್ನ ಮಹತ್ತರ ಪಾತ್ರವನ್ನು ಖುಷಿಯಿಂದ ಘೋಷಿಸಿದೆ. ಆರ್‌ಸಿಬಿ ಜತೆ ಹೊಸ ರೋಮಾಂಚಕ ಪಯಣ ಆರಂಭಿಸುತ್ತಿದ್ದು, ಇದು ಸಂತೋಷದೊಂದಿಗೆ ಉದ್ಯಮದಲ್ಲಿ ಹೊಸ ಭಾಷ್ಯ ಬರೆಯಲಿದೆ. ಕ್ರಿಕೆಟ್ ಸ್ಫೋಟಕ ಆಟದೊಂದಿಗೆ ಹಾಂಗ್ಯೋ ಐಸ್‌ಕ್ರೀಮ್‌ನ ಆಹ್ಲಾದಕರ, ಬಾಯಿಯಲ್ಲಿ ನೀರು ಬರಿಸುವ, ಮನಮೋಹಕ ಶ್ರೇಣಿಯ ಐಸ್‌ಕ್ರೀಮ್‌ಗಳು ಸಂಭ್ರಮದ ವಾತಾವರಣಕ್ಕೆ ಕಾರಣವಾಗಲಿದೆ ಎಂದು ಹಾಂಗ್ಯೋ ಐಸ್‌ಕ್ರೀಮ್ಸ್ ಪ್ರೈ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ.

ಹಾಂಗ್ಯೋ ಐಸ್‌ಕ್ರೀಮ್ ತನ್ನ ಈ ಸಹಯೋಗವನ್ನು ಕ್ರಿಕೆಟ್ ಮತ್ತು ಐಸ್‌ಕ್ರೀಮ್‌ನ ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ನೋಡುತ್ತದೆ. ಕ್ರಿಕೆಟ್ ಆನಂದಿಸಲು ಬರುವ ಪ್ರತಿಯೊಬ್ಬ ಕ್ರಿಕೆಟ್ ಪ್ರಿಯರಿಗೆ ಹಾಂಗ್ಯೋ ಐಸ್‌ಕ್ರೀಮ್ ಕ್ಷಣಮಾತ್ರದಲ್ಲಿ ಲಭ್ಯವಾಗಲಿದೆ. ಇದು ಕ್ರಿಕೆಟ್ ಆಟಕ್ಕೆ ಮತ್ತಷ್ಟು ಮೆರುಗು ನೀಡಲಿದೆ.

ಟಾಪ್ ಬ್ರಾೃಂಡ್‌ಗಳ ಸಾಲಿನಲ್ಲಿ

ಹಾಂಗ್ಯೋ ಐಸ್‌ಕ್ರೀಮ್ ಪ್ರಸ್ತುತ ಟಾಪ್ ಐಸ್‌ಕ್ರೀಮ್ ಬ್ರಾೃಂಡ್‌ಗಳಲ್ಲಿ ಒಂದಾಗಿದೆ. ಹಾಂಗ್ಯೋ ಐಸ್‌ಕ್ರೀಮ್ ಮೂರು ದಶಲಕ್ಷ ಗ್ರಾಹಕರನ್ನು ಸಂತೃಪ್ತಗೊಳಿಸಿದೆ. ದಿನಕ್ಕೆ 1.2 ಲಕ್ಷ ಲೀಟರ್‌ನಷ್ಟು ಉತ್ಪಾದನಾ ಸಾಮರ್ಥ್ಯ ಹೊಂದಿದೆ. 30 ಸಾವಿರ ರಿಟೇಲ್ ಶಾಪ್‌ಗಳು, 330 ಚಾನಲ್ ಪಾಲುದಾರರು ಮತ್ತು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗದಾತನಾಗಿ ಯಶಸ್ಸು ಕಂಡಿದೆ. ಸಣ್ಣ ಪಟ್ಟಣವೊಂದರಲ್ಲಿ ನೆಚ್ಚಿನ ಐಸ್‌ಕ್ರೀಮ್ ತಾಣವಾಗಿ ಹುಟ್ಟಿಕೊಂಡು, ಕಠಿಣ ಪರಿಶ್ರಮದಿಂದ ಉದ್ಯಮ ದೈತ್ಯನಾಗಿ ವಿಕಸನಗೊಳ್ಳುವವರೆಗಿನ ಹಾಂಗ್ಯೋ ಐಸ್‌ಕ್ರೀಮ್ ಪಯಣ, ಕ್ರಿಕೆಟ್ ಬಾಂಧವ್ಯದೊಂದಿಗೆ ಹೊಸದಾರಿಗೆ ಹೊರಳಲಿದೆ. 2002ರಲ್ಲಿ ಸ್ಥಾಪನೆಯಾದ ಹಾಂಗೋ ಐಸ್‌ಕ್ರೀಮ್ಸ್ ಪ್ರೈ. ಲಿಮಿಟೆಡ್ ದಕ್ಷಿಣ ಭಾರತದ ಏಳು ರಾಜ್ಯಗಳನ್ನು ವ್ಯಾಪಿಸಿರುವ ಮೆಚ್ಚಿನ ಐಸ್‌ಕ್ರೀಮ್ ಉದ್ಯಮವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net