

ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರನ್ನು ಹನಿಟ್ರಾೃಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಯುವತಿ ಸಹಿತ 7 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೋಂದೆಲ್‌ನ ಸುರೇಂದ್ರ ಆಲಿಯಾಸ್ ಪ್ರೀತಂ(29), ಮೂಡುಶೆಡ್ಡೆಯವರಾದ ಕಿಶೋರ್(32), ಮುರಲಿ(26), ಸುಶಾಂತ್(23), ಲಿಖಿತ್(23), ತರುಣ್ (20) ಮತ್ತು ಅಕ್ಷತಾ (24) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿಯ ಬಂಧನ ಬಾಕಿ ಇದೆ.
ಕಳೆದ ಮೇ 16ರಂದು ಮೂಡುಶೆಡ್ಡೆಯ ರೆಸಾರ್ಟ್‌ಗೆ ಬಂದಿದ್ದ ಕೇರಳ ಉದ್ಯಮಿಯ ಪೊಟೋ, ವೀಡಿಯೋ ಸೆರೆ ಹಿಡಿದಿದ್ದ ಆರೋಪಿಗಳು ಅನಂತರ ಬೆದರಿಸಿ ಹಣ ಸುಲಿಗೆ ಮಾಡಿದ್ದರು ಎಂದು ಕಾವೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.ಆರೋಪಿಗಳ ಪೈಕಿ ಸುರೇಂದ್ರನ ವಿರುದ್ಧ ಈ ಹಿಂದೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಮಂಗಳೂರು ಪೂರ್ವ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಕಿಶೋರ್ ವಿರುದ್ಧ ಬರ್ಕೆ ಠಾಣೆಯಲ್ಲಿ ಹಲ್ಲೆ ಪ್ರಕರಣ, ಸುಶಾಂತ್ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.