

ಭಾಗಮಂಡಲ:
ಭಾನುವಾರ ನಡೆದ ಪ್ರತಿಷ್ಠಿತ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹೊಸೂರು ಸತೀಶ್ ಜೋಯಪ್ಪ ನೇತೃತ್ವದ ತಂಡ ಜಯಭೇರಿ ಭಾರಿಸಿದೆ. ೨೦೨೩ ರಿಂದ ೨೦೨೮ ರ ಅವಧಿಗಾಗಿ ನಡೆದ ಈ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು.
ಸೋಮವಾರಪೇಟೆ ವಿಭಾಗದ ಸಾಮಾನ್ಯ ಕ್ಷೇತ್ರದಿಂದ ಹರಗ ದಿನೇಶ್, ಕೆ ಕೆ ಗೋಪಾಲ, ಮಾಹಿಳಾ ಮಿಸಲು ಕ್ಷೇತ್ರದಿಂದ ಕೆ. ಕೆ. ಸೌಮ್ಯಾ ಅವಿರೋಧವಾಗಿ ಆಯ್ಕೆಯಾಗಿದ್ದು, ಸೋಮವಾರಪೇಟೆಯಿಂದ ಹಿಂದುಳಿದ ವರ್ಗದಿಂದ ಸ್ಪರ್ಧಿಸಿದ್ದ ಬೋಪಣ್ಣ ೮೨ ಮತಗಳಿಸಿದರೆ, ಪ್ರತಿಸ್ಪರ್ಧಿ ಉದಯಕುಮಾರ್ ೪೬ ಮತಗಳಿಸಿ ಸೋಲು ಅನುಭವಿಸಿದರು.
ಹೊಸೂರು ಸತೀಶ್‌ಕುಮಾರ್ ನೇತೃತ್ವದ ಬಿಜೆಪಿ ಬೆಂಬಲಿತರಾಗಿ ಪರಿಶಿಷ್ಟ ಜಾತಿಯಿಂದ ಜಯಂತ್ ತಲಕಾವೇರಿ ಅವಿರೋಧವಾಗಿ ಆಯ್ಕೆಯಾಗಿದ್ದು, ಹಿಂದುಳಿದ ವರ್ಗದ ಕ್ಷೇತ್ರದಿಂದ ಅಯ್ಯಣಿರ ಎಂ. ದಿನೇಶ್ ೫೨೭ ಗಳಿಸಿ ಆಯ್ಕೆಯಾದರೆ ಪ್ರತಿಸ್ಪರ್ಧಿ ಬಿಲ್ಲವರ ಬೈರಪ್ಪ ೧೬೩ ಮತ ಪಡೆದು ಸೋಲು ಕಂಡರು.
ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಎನ್. ಕುಸುಮ ಶಿರಕಜೆ ೪೧೭ ಮತಗಳಿಸಿದರೆ, ಪ್ರತಿಸ್ಪರ್ಧಿ ಅಮೆ ಜಿ. ಸರೋಜಾ ೧೭೮ ಮತಗಳಿಸಿ ಸೋಲು ಕಂಡರು.
ಸಾಮಾನ್ಯ ವರ್ಗದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಸ್ಪರ್ಧಿಸಿದ್ದ ಹೊಸೂರು ಸತೀಶ್ ಜೋಯಪ್ಪ (೪೫೭), ಕುದುಕುಳಿ ಅಶ್ವತ್ಥ್ (೪೦೨), ದೇವಂಗೋಡಿ ಭಾಸ್ಕರ (೩೭೦), ಕೆದಂಬಾಡಿ ಯು. ಮೋಹನ (೩೬೦), ಪಾಣತ್ತಲೆ ಎ. ಲೋಕನಾಥ (೪೧೧), ಶಿರಕಜೆ ಎಂ. ಲೋಕಪ್ರಕಾಶ್ (೪೧೯), ಪೊಡನೋಳನ ಸಿ. ವಿಠಲ (೪೭೪) ಗೆಲುವು ಸಾಧಿಸಿದರು. ಇವರ ವಿರುದ್ಧ ಸ್ಪರ್ಧೆಗೆ ಇಳಿದಿದ್ದ ಕೋಡಿ ಮೋಟಯ್ಯ (೨೧೫) ಕೆದಂಬಾಡಿ ಚೇತನ್ (೧೩೬), ಬಾರಿಕೆ ನಿರಂಜನ್ (೧೨೬), ಅಮೆ ಮಾದಪ್ಪ (೧೫೮), ಕೆದಂಬಾಡಿ ಟಿ.ರಮೇಶ್ (೧೮೫), ಚೆದುಕಾರು ರವಿ (೧೫೦), ದೇವಂಗೋಡಿ ವೇಗೆಂದ್ರ (೧೨೩) ಸೋಲು ಕಾಣಬೇಕಾಯಿತು.