ನೀರಿನ ಮಷಿನ್ ಚಾಲು ಮಾಡಲು ಹೋದ ವ್ಯಕ್ತಿ ವಿದ್ಯುತ್ ತಗುಲಿ ಸಾವು

Crime Logo
Published on

ಹಾನಗಲ್ಲ: ನೀರಿನ ಮಷಿನ್ ಚಾಲು ಮಾಡಲು ಹೋದ ವ್ಯಕ್ತಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಕಾಲ್ವೇಕಲ್ಲಾಪುರ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ.
ಪಂಚಾಕ್ಷರಿ ಬಸವರಾಜ ಕೂಡಲ (23) ಮೃತ ದುರ್ದೈವಿ.
ಈತ ಮನೆಯಲ್ಲಿ ನೀರಿನ ಮಷಿನ್ ಚಾಲು ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net