ಆಗಸ್ಟ್ 27ರಂದು ರಾಮಕೃಷ್ಣ ಮಠದ ಆವರಣದಲ್ಲಿ ಜೇನು ಸಾಕಾಣಿಕೆ ತರಬೇತಿ

IMG-20230822-WA0217
Published on

ಮಂಗಳೂರು: ಇಲ್ಲಿನ‌ ಸಾವಯವ ಕೃಷಿಕ ಗ್ರಾಹಕ ಬಳಗದ ಆಶ್ರಯದಲ್ಲಿ ರಾಮಕೃಷ್ಣ ಮಿಷನ್ ಮಂಗಳೂರು ಸಹಯೋಗದೊಂದಿಗೆ ತುಡುವೆ ಮತ್ತು ಮೊಜಂಟಿ‌ ಜೇನು ಸಾಕಾಣಿಕೆ ತರಬೇತಿ ಆಗಸ್ಟ್ 27ರಂದು‌ ಮಂಗಳೂರು ರಾಮಕೃಷ್ಣ ಮಿಷನ್ ಆವರಣದಲ್ಲಿ ‌ನಡೆಯಲಿದೆ.
ರಾಜ್ಯಮಟ್ಟದ ತರಬೇತುದಾರರಾದ ರಾಧಾಕೃಷ್ಣ ಆರ್. ಕೋಡಿ ಮತ್ತು ‌ರಾಮಚಂದ್ರ ಪುದ್ಯೋಡು ತರಬೇತುದಾರರಾಗಿ ಪಾಲ್ಗೊಳ್ಳುವರು.
ಆಸಕ್ತರು ಹೆಸರು ನೋಂದಾಯಿಸಿ ಪಾಲ್ಗೊಳ್ಳಬಹುದು. ಮಾಹಿತಿಗೆ 9480682923 ಸಂಖ್ಯೆ ಗೆ ಕರೆ ಮಾಡಬಹುದು ಎಂದು ಸಾವಯವ ಕೃಷಿಕ ಗ್ರಾಹಕ ಬಳಗದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net