ಆನೆ-ಮಾನವ ಸಂಘರ್ಷ ತಡೆಗೆ ರಿ-ಹಾಬ್

honey bee fence
Published on

ಮಡಿಕೇರಿ:

ಅರಣ್ಯದಂಚಿನ ಕೃಷಿಕರನ್ನು ಕಾಡುತ್ತಿರುವ ಆನೆ-ಮಾನವ ಸಂಘರ್ಷ ಪರಿಹಾರಕ್ಕೆ 'ಜೇನು ನೊಣದ ಬೇಲಿ' ಪರಿಹಾರ ಆಗಬಲ್ಲದು ಎನ್ನುವುದು ಪ್ರಾಯೋಗಿಕ ಚಟುವಟಿಕೆಗಳಿಂದ ಸಾಬೀತಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಇಂಥದ್ದೊAದು ವೈಜ್ಞಾನಿಕ ಅಧ್ಯಯನ ಕೊಡಗಿನಲ್ಲಿ ನಡೆದಿದ್ದು, ಜೇನು ಸಾಕಾಣಿಕೆ ಮೂಲಕ ಆದಾಯದಲ್ಲೂ ಹೆಚ್ಚಳ ಕಂಡುಕೊಳ್ಳಬಹುದಾಗಿದೆ. ಈ ಸಂಬAಧ ಅಧ್ಯಯನ ವರದಿಯನ್ನು ಈಗಾಗಲೇ ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗಕ್ಕೆ ಸಲ್ಲಿಸಲಾಗಿದೆ.

ಕೊಡಗು ಸೇರಿದಂತೆ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಆನೆ-ಮಾನವ ಸಂಘರ್ಷ ಮಿತಿಮೀರಿದೆ. ಹಗಲಿನಲ್ಲೇ ಕಾಡಾನೆಗಳು ಜನವಸತಿ ಪ್ರದೇಶದತ್ತ ಬರುತ್ತಿರುವುದು ಸಾಮಾನ್ಯ ಎಂಬAತಾಗಿದೆ. ಕಾಡಂಚಿನ ಪ್ರದೇಶಗಳಲ್ಲಿ ಕೃಷಿ ಮಾಡಲು ಕೃಷಿಕರು ಹರಸಾಹಸ ಪಡುತ್ತಿದ್ದಾರೆ. ವರ್ಷಗÀಟ್ಟಲೆ ಕಷ್ಟಪಟ್ಟು ಬೆಳೆದ ಅಡಿಕೆ, ಕಾಫಿ, ತೆಂಗು ಬಾಳೆ ಗಿಡಗಳು ಆನೆಗಳ ಪಾಲಾಗುತ್ತಿದೆ. ಭತ್ತ, ಜೋಳ ಫಸಲು ಬರುವ ಸಮಯದಲ್ಲಿ ಆನೆಗಳಿಂದ ಇವುಗಳನ್ನು ರಕ್ಷಿಸುವುದು ಕೂಡ ಅನ್ನದಾತರಿಗೆ ಕಷ್ಟವಾಗುತ್ತಿದೆ. ಇದೇ ಕಾರಣಕ್ಕೆ ಬಹುತೇಕ ಕಡೆಗಳಲ್ಲಿ ಕೃಷಿ ಮಾಡುವುದನ್ನೇ ಬಿಟ್ಟಿರುವುದು ಕಂಡುಬರುತ್ತಿದೆ.

ಆನೆ-ಮಾನವ ಸಂಘರ್ಷ ತಡೆಯಲು ಸರ್ಕಾರ ಅರಣ್ಯ ಇಲಾಖೆ ಮೂಲಕ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಆದರೂ ನಿರೀಕ್ಷಿತ ಪ್ರಯೋಜನ ಆಗುತ್ತಿಲ್ಲ. ಅರಣ್ಯದಂಚಿನಲ್ಲಿ ಕಂದಕ ನಿರ್ಮಾಣ, ಸೋಲಾರ್ ಬೇಲಿ ಅಳವಡಿಕೆ, ಹ್ಯಾಂಗಿAಗ್ ಫೆನ್ಸ್ ಪ್ರಯೋಗ, ರೈಲ್ವೇ ಹಳಿಗಳ ಬ್ಯಾರಿಕೇಡ್ ನಿರ್ಮಾಣ.. ಹೀಗೆ ಸಾಕಷ್ಟು ಪ್ರಯತ್ನಗಳು ಅರಣ್ಯ ಇಲಾಖೆ ಕಡೆಯಿಂದ ನಡೆಯುತ್ತಿದ್ದರೂ, ಬಾಯಾರಿಕೆಯಾದಾಗ, ಹೊಟ್ಟೆ ಹಸಿದಾಗ, ನಿರುಮ್ಮಳವಾಗಿ ತಿರುಗಾಡಬೇಕು ಎಂದು ಅನ್ನಿಸಿದಾಗ ಆನೆಗಳಿಗೆ ಇವೆಲ್ಲಾ ಲೆಕ್ಕಕ್ಕೇ ಬರುವುದಿಲ್ಲ. ಇವುಗಳನ್ನು ದಾಟಿ ಹೊರಗೆ ಹೋಗಲು ತಮ್ಮದೇ ಆದ ಉಪಾಯಗಳನ್ನು ಆನೆಗಳು ಕಂಡುಕೊAಡಿವೆ.

ಮತ್ತೊಂದು ಕಡೆ ಆನೆ-ಮಾನವ ಸಂಘರ್ಷಕ್ಕೆ ಕಡಿವಾಣ ಹಾಕಲು ಅಲ್ಲಲ್ಲಿ ನೈಸರ್ಗಿಕ ವಿಧಾನಗಳ ಪ್ರಯೋಗವೂ ನಡೆಯುತ್ತಿದೆ. ಅರಣ್ಯದೊಳಗೆ ಹೊಂಡಗಳನ್ನು ತೋಡಿ ಅಲ್ಲಿಯೇ ಆನೆಗಳಿಗೆ ಕುಡಿಯುವ ನೀರು ಲಭ್ಯವಾಗುವಂತೆ ಮಾಡುವುದು, ಅರಣ್ಯದಂಚಿನಲ್ಲಿ ಆನೆಗಳಿಗೆ ಇಷ್ಟವಾದ ಬಿದಿರು, ಕಬ್ಬು, ಬಾಳೆ, ಜೋಳ ಮತ್ತಿತರ ಬೆಳೆಗಳನ್ನು ಬೆಳೆದು ಇವುಗಳು ಕಾಡಿನಿಂದ ಹೊರಗೆ ಹೋಗದಂತೆ ತಡೆಯುವುದು, ಅರಣ್ಯ ಮತ್ತು ಜನವಸತಿ ಪ್ರದೇಶಗಳ ಮಧ್ಯೆ ಆನೆಗಳಿಗೆ ಹಿಡಿಸದ ಘಾಟು ಸಸ್ಯಗಳನ್ನು ಬೆಳೆಯುವುದು, ಮೆಣಸಿನ ಹೊಗೆ ಹೊರಹಾಕುವುದು ಮತ್ತಿತರ ಪ್ರಯತ್ನಗಳೂ ನಡೆಯುತ್ತಿವೆ. ಇದರಿಂದಲೂ ಆನೆ ಹಾವಳಿಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗಿಲ್ಲ.

ಇವೆಲ್ಲವುಗಳ ಮಧ್ಯೆ ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಜೇನು ನೊಣ ಬಳಕೆಯಿಂದ ಆನೆ ಮಾನವ ಸಂಘರ್ಷಕ್ಕೆ ಕಡಿವಾಣ (ರಿ-ಹಾಬ್) ಎನ್ನುವ ಯೋಜನೆಯೊಂದನ್ನು 2021ರಲ್ಲಿ ರೂಪಿಸಿದೆ. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಆನೆ - ಮಾನವ ಸಂಘರ್ಷಕ್ಕೆ ಸಾಕ್ಷಿಯಾಗಿರುವ ನಾಗರಹೊಳೆ ರಾಷ್ಟಿçÃಯ ಉದ್ಯಾನವ ವ್ಯಾಪ್ತಿಯಲ್ಲಿ ಆರಂಭಿಸಲಾಗಿತ್ತು.

ಕೀನ್ಯಾ, ಶ್ರೀಲಂಕಾ ಸೇರಿದಂತೆ ಆನೆಗಳ ಸಂಖ್ಯೆ ಹೆಚ್ಚು ಇರುವ ದೇಶಗಳಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ಅಲ್ಲಿ 'ಜೇನು ನೊಣದ ಬೇಲಿ'ಗೆ ಹೆಚ್ಚು ಆಕ್ರಮಣಕಾರಿ ತಳಿಯ ಜೇನುನೊಣಗಳನ್ನು ಬಳಸಲಾಗುತ್ತಿದೆ. ಕೊಡಗಿನಲ್ಲಿ 'ಎಪೀಸ್ ಸಿರೇನಾ' ಜಾತಿಯ ಅಷ್ಟೊಂದು ಆಕ್ರಮಣಕಾರಿ ಅಲ್ಲದ ಭಾರತೀಯ ಜೇನು ನೊಣಗಳನ್ನು ಬಳಸಿ ಕಾಡಾನೆ ಹಾವಳಿ ತಡೆಗಟ್ಟುವ ಯೋಜನೆ ರೂಪಿಸಲಾಗಿದೆ.

ಪೊನ್ನಂಪೇಟೆ ತಾಲೂಕು ನಾಣಚ್ಚಿ ಭಾಗದಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು, ಅರಣ್ಯ ದಾಟಿ ಬರುವ ಆನೆಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನದ ಪ್ರಯೋಗ

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕಣ್ಗಾವಲಿನಲ್ಲಿ ನಡೆಸಲಾಗಿದೆ. ರಿ - ಹಾಬ್ ಯೋಜನೆಯ ಪ್ರಧಾನ ಸಂಶೋಧಕ ಡಾ. ಆರ್.ಎನ್. ಕೆಂಚರೆಡ್ಡಿ ಈ ಪ್ರಯೋಗದ ನೇತೃತ್ವ ವಹಿಸಿದ್ದರು. ಆರಂಭದಲ್ಲಿ 6 ಕಡೆಗಳಲ್ಲಿ ಜೇನು ಪೆಟ್ಟಿಗೆಗಳನ್ನು ಇಡುವ ಮೂಲಕ ಈ ಪ್ರಯೋಗ ನಡೆಸಲಾಗಿತ್ತು. ಈ ಜೇನು ಪೆಟ್ಟಿಗೆಗಳನ್ನು ಇಟ್ಟಿರುವ ಜಾಗ ಬಳಸದೆ ಬೇರೆ ದಾರಿಯನ್ನು ಆನೆಗಳು ಬಳಸಿರುವುದು ಕಂಡುಬAದಿತ್ತು.

ನಂತರ ಜಿಲ್ಲೆಯ ಎಂಟು ಸ್ಥಳಗಳಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಮತ್ತಷ್ಟು ಅಧ್ಯಯನ ಮಾಡಲಾಗಿದೆ. ಮೊದಲೆಲ್ಲಾ ಆನೆಗಳು ಜೇನು ಪೆಟ್ಟಿಗೆಗಳನ್ನೇ ಹಾಳು ಮಾಡಲು ಪ್ರಯತ್ನಿಸಿದ್ದವು. ಆದರೆ ಜೇನು ನೊಣಗಳ ಮುಂದೆ ಆನೆಗಳ ಆಟ ನಡೆಯಲಿಲ್ಲ. ಅವು ತಮ್ಮ ಮೂಲ ಕಾರಿಡಾರ್ ಅನ್ನೇ ಬದಲಿಸಿರುವುದು ಪ್ರಯೋಗಗಳಲ್ಲಿ ಕಂಡುಬAದಿದೆ. ಮೊದಲು 4 ಅಡಿ ಅಂತರದಲ್ಲಿ ಜೇನು ಪಟ್ಟಿಗೆಗಳನ್ನು ಇಡಲಾಗುತ್ತಿತ್ತು. ನಂತರ ಇದನ್ನು 3 ಅಡಿಗೆ ಇಳಿಸಿ ನೋಡಿದಾಗ ಸಾಕಷ್ಟು ಯಶಸ್ಸು ಕಂಡಿದೆ ಎನ್ನುತ್ತಾರೆ ಕೆಂಚ ರೆಡ್ಡಿ

ಈ ಪ್ರಯೋಗ ಶೇ. 70ರಷ್ಟು ಯಶಸ್ವಿಯಾಗಿದೆ. ಆನೆಗಳು ವೇಗವಾಗಿ ಹೋಗಬಹುದಾದÀ ಜಾಗಗಳಲ್ಲಿ ಜೇನುಹುಳದ ಬೇಲಿ ಅಷ್ಟೇನೂ ಉಪಯೋಗಕ್ಕೆ ಬರುವುದಿಲ್ಲ. ದಟ್ಟ ಕಾಡು, ಆನೆ ಕಡಂಗ, ವೇಗವಾಗಿ ಚಲಿಸಲು ಸಾಧ್ಯವಿರದ ಪ್ರದೇಶಗಳಲ್ಲಿ ಪ್ರಯೋಗಕ್ಕೆ ಫಲ ಸಿಕ್ಕಿದೆ ಎನ್ನುತ್ತಾರೆ ಸಂಶೋಧಕರು.

ರಿ - ಹಾಬ್ ಯೋಜನೆಯಲ್ಲಿ ಅತಿ ಹೆಚ್ಚು ಆನೆ ಹಾವಳಿ ಇರುವ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಜೇನು ಪೆಟ್ಟಿಗೆಗಳನ್ನು ಇಡಲಾಗಿತ್ತು. ಮರದ ಮೇಲೆ ಅಥವಾ ನೆಲದಲ್ಲಿ ಜೇನು ಪೆಟ್ಟಿಗೆಗಳನ್ನು ಇಟ್ಟು ಪೆಟ್ಟಿಗೆಗಳ ಮಧ್ಯೆ ತಂತಿಯನ್ನು ಅಳವಡಿಸಲಾಗುತ್ತದೆ. ಪೆಟ್ಟಿಗೆಗಳ ಮಧ್ಯೆ ಆನೆ ದಾಟುವಾಗ ತಂತಿ ಸ್ಪರ್ಶಿಸಿದ ಕೂಡಲೇ ಪೆಟ್ಟಿಗೆಯಲ್ಲಿರುವ ಜೇನುನೊಣಗಳು ಭಾರಿ ಶಬ್ಧದೊಂದಿಗೆ ದಾಳಿಗೆ ಮುಂದಾಗುತ್ತವೆ. ಈ ಸಂದರ್ಭದಲ್ಲಿ ಆನೆಯ ಸೂP್ಷÀ್ತçö್ಮ ಭಾಗಗಳಿಗೆ ಜೇನು ನೊಣಗಳು ಕಚ್ಚುವ ಭಯದಿಂದ ಪಲಾಯನ ಮಾಡುತ್ತವೆ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶ. ಇದರ ಆಧಾರದಲ್ಲೇ ಜೇನು ನೊಣದ ಬೇಲಿ ಪ್ರಯೋಗ ನಡೆಸಲಾಗಿದೆ.

ಈ ಪ್ರಯೋಗ ಯಶಸ್ವಿ ಆಗಿರುವುದುರಿಂದ ಅರಣ್ಯದಂಚಿನ ರೈತರು, ಬೆಳೆಗಾರಿಗೆ ಆನೆ ದಾಳಿಯಿಂದ ರP್ಷÀಣೆ ಜತೆಗೆ ಹೆಚ್ಚುವರಿ ಆದಾಯದ ಮೂಲ ಕೂಡ ಸಿಗಲಿದೆ. ತೋಟ, ಗದ್ದೆಯ ಬೇಲಿಗಳಲ್ಲಿ ಜೇನು ಪೆಟ್ಟಿಗೆ ಇಡುವುದರಿಂದ ಜೇನು ತುಪ್ಪ ಉತ್ಪಾದಿಸಿ ಮಾರಾಟ ಮಾಡುವ ಅವಕಾಶ ಇದೆ. ಮೇಣವನ್ನೂ ಮಾರಬಹುದು. ಜೇನು ಹುಳುಗಳು ಪರಾಗಸ್ಪರ್ಶಕ್ಕೆ ಹೆಚ್ಚು ಸಹಕಾರ ನೀಡುವುದರಿಂದ ಕಾಫಿ, ಭತ್ತದ ಸೇರಿದಂತೆ ವಿವಿಧ ಬೆಳೆಗಳ ಉತ್ಪಾದನೆಯೂ ಹೆಚ್ಚಾಗಲಿದೆ. ಸೋಲಾರ್ ಬೇಲಿ, ಕಂದಕ ನಿರ್ಮಾಣ, ರೈಲ್ವೆ ಕಂಬಿಯ ಬೇಲಿ ರೀತಿಯ ವೆಚ್ಚಗಳಿಗೂ ಕಡಿವಾಣ ಬೀಳಬಹುದು.

ರಿ - ಹಾಬ್ ಯೋಜನೆಯಲ್ಲಿ ಕೊಡಗಿನಲ್ಲಿ ಮಾಡಿದ ಪ್ರಯೋಗ ಯಶಸ್ವಿಯಾಗಿದೆ. ಇದಕ್ಕೆ ಸಂಬAಧಿಸಿದ ವರದಿಯನ್ನು ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗಕ್ಕೆ ಸಲ್ಲಿಸಲಾಗಿದೆ. ಅವರು ಆನೆ ಹಾವಳಿ ಇರುವ ದೇಶದ ಬೇರೆ ಕಡೆಗಳಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಇದಕ್ಕೆ ಸಂಬAಧಿಸಿದAತೆ ಕೆಲಸಗಳು ನಡೆಯುತ್ತಿದೆ. ಈ ಯೋಜನೆ ಫಲಪ್ರದವಾಗಲು ಪ್ರಮುಖವಾಗಿ ಜೇನುಪೆಟ್ಟಿಗೆಗಳಲ್ಲಿ ಜೇನು ಕುಟುಂಬಗಳು ಇರುವಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ಕೊಡಬೇಕು. ಈ ಯೋಜನೆಯಿಂದ ಕೃಷಿಕರಿಗೂ ಆರ್ಥಿಕ ಲಾಭವಾಗಲಿದೆ.

- ಡಾ. ಆರ್.ಎನ್. ಕೆಂಚರೆಡ್ಡಿ, ಪ್ರಧಾನ ಸಂಶೋಧಕ, ರಿ - ಹಾಬ್ ಯೋಜನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net