ಮದ್ಯದ ಅಮಲಿನಲ್ಲಿ ವಿಷಕಾರಿ ಎಣ್ಣೆ ಸೇವಿಸಿ ಸಾವು

Published on

ಹಾನಗಲ್ಲ: ಮದ್ಯ ಸೇವಿಸಿದ ಅಮಲಿನಲ್ಲಿ ಯಾವುದೋ ವಿಷಕಾರಕ ಎಣ್ಣೆ ಸೇವಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಸಾವಿಕೇರಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ಗ್ರಾಮದ ದೇವೇಂದ್ರಪ್ಪ ಈರಪ್ಪ ಯತ್ನಳ್ಳಿ (75) ಮೃತ ವ್ಯಕ್ತಿ.
ಈತ ಮನೆಯಲ್ಲಿ ಒಬ್ಬನೆ ಇದ್ದಾಗ ವಿಪರೀತ ಮದ್ಯ ಸೇವಿಸಿದ್ದಾನೆ. ನಂತರದ ಮದ್ಯದ ಅಮಲಿನಲ್ಲಿ ಯಾವುದೋ ವಿಷಕಾರಿ ಎಣ್ಣೆ ಸೇವಿಸಿ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net