ನಕಲಿ ಜೇನು ಮಾರಾಟ ಜಾಲ ಬಯಲಿಗೆ

honey
Published on

ಮಡಿಕೇರಿ:

ರಸ್ತೆ ಬದಿಯಲ್ಲಿ ನಕಲಿ ಜೇನುತುಪ್ಪ ಮಾರಾಟ ಮಾಡುತ್ತಿದ್ದ ಜಾಲವನ್ನು ಜಿಲ್ಲಾ ಆಹಾರ ಮತ್ತು ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ಬುಧವಾರ ಬಯಲಿಗೆಳೆದಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಮಾರಾಟ ಮಾಡುತ್ತಿದ್ದ ಜೇನಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವಿಷಯವನ್ನು ಪೊಲೀಸ್ ಇಲಾಖೆ ಗಮನಕ್ಕೆ ತರಲಾಗಿದೆ. ಇಂಥ ವ್ಯವಹಾರಗಳಲ್ಲಿ ಸಾರ್ವಜನಿಕರು ಜಾಗರೂಕರಾಗಿರುವಂತೆ ಸಲಹೆ ನೀಡಲಾಗಿದೆ.

ಕುಶಾಲನಗರ ಪಟ್ಟಣ ಮತ್ತು ತಾಲೂಕು ವ್ಯಾಪ್ತಿಯ ತೊರೆನೂರು ಮತ್ತಿತರ ಭಾಗಗಳಲ್ಲಿ ರಸ್ತೆ ಬದಿ ಆಟೋ ನಿಲ್ಲಿಸಿಕೊಂಡು ಗ್ರಾಹಕರಿಗೆ ನಂಬಿಕೆ ಬರುವಂತೆ ಜೇನು ಗೂಡಿನೊಂದಿಗೆ ನಕಲಿ ಜೇನು ಮಾರಾಟ ಮಾಡುತ್ತಿದ್ದ ಬಿಹಾರ ಮೂಲದ ಖದೀಮರು ಸಿಕ್ಕಿಬಿದ್ದಿದ್ದಾರೆ. ಕೊಡಗು ಜಿಲ್ಲಾ ಆಹಾರ ಮತ್ತು ಸುರಕ್ಷತಾ ಪ್ರಾಧಿಕಾರದ ಅಧಿಕಾರಿ ಡಾ. ಅನಿಲ್ ಧಾವನ್ ದಾಳಿ ನಡೆಸಿದ ಸಂದರ್ಭ ಅಲ್ಪ ಪ್ರಮಾಣದ ಅಸಲಿ ಜೇನಿಗೆ ದೊಡ್ಡ ಪ್ರಮಾಣದಲ್ಲಿ ನಕಲಿ ಜೇನು ಸೇರಿಸಿ ಮಾರಾಟ ಮಾಡುತ್ತಿದ್ದ ವಿಷಯ ಬಹಿರಂಗವಾಗಿದೆ. ರಾಸಾಯನಿಕಗಳನ್ನು ಒಳಗೊಂಡ ಬೆಲ್ಲದ ಪಾಕವನ್ನು ಬಕೆಟ್‌ಗಳಲ್ಲಿ ತುಂಬಿಸಿ ಸ್ವಾಭಾವಿಕ ಜೇನು ತುಪ್ಪವೆಂದು ಸಾರ್ವಜನಿಕರು ನಂಬುವ ರೀತಿಯಲ್ಲಿ ಜೇನು ಹುಳು ಹಾಗೂ ಜೇನುಗೂಡಿನೊಂದಿಗೆ ಹೆದ್ದಾರಿ ಹಾಗೂ ಜನನಿಬಿಡ ರಸ್ತೆಗಳಲ್ಲಿ ಮಾರಾಟ ಮಾಡುತ್ತಿದ್ದ ಈ ಗುಂಪುಗಳ ಮಾಹಿತಿ ಪಡೆದ ಡಾ.ಅನಿಲ್ ಧಾವನ್ ಕುಶಾಲನಗರದ ಪೊಲೀಸರ ಸಹಕಾರ ಪಡೆದು ಪ್ರತ್ಯೇಕವಾಗಿ ಮೂರು ಆಟೋಗಳಲ್ಲಿ ಸಂಗ್ರಹಿಸಿಟ್ಟಿದ್ದ ನೂರಾರು ಲೀಟರ್ ನಷ್ಟು ಸಿಹಿ ಪಾಕದ ಸಂಗ್ರಹದೊAದಿಗೆ ಆಟೋಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ವಾಭಾವಿಕ ಜೇನು ಎಂದು ಸಾರ್ವಜನಿಕರನ್ನು ನಂಬಿಸಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ ಹತ್ತಕ್ಕೂ ಹೆಚ್ಚು ಜನರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ದಂಧೆಕೋರರಿAದ ಮಾರಾಟವಾಗುತ್ತಿದ್ದ ನಕಲೀ ಜೇನನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕಿದೆ.

ಕೆಜಿಗಟ್ಟಲೇ ಜೇನನ್ನು ಸಾವಿರಾರು ರೂ.ಹಣ ಕೊಟ್ಟು ಖರೀದಿಸಿ ಮೋಸದ ಜಾಲಕ್ಕೆ ಬಿದ್ದವರು ತಾವು ಖರೀದಿಸಿದ್ದು ನಕಲೀ ಜೇನು ಎಂದು ತಿಳಿಯುತ್ತಿದ್ದಂತೆಯೇ ಖರೀದಿಸಿದ ಜೇನಿನೊಂದಿಗೆ ಆಗಮಿಸಿ ಹಣ ಮರಳಿ ಪಡೆಯಲು ಪೊಲೀಸರಿಗೆ ದುಂಬಾಲು ಬಿದ್ದ ಘಟನೆಯೂ ನಡೆಯಿತು.

ಈ ರೀತಿಯಲ್ಲಿ ನಕಲಿ ಜೇನು ಮಾರುವವರ ದೊಡ್ಡ ಜಾಲವೇ ಇದೆ. ಇವರೆಲ್ಲಾ ಬಿಹಾರ ಮೂಲದವರಾಗಿದ್ದು, ಅಸಲಿ ಜೇನು ಎಂದು ನಂಬಿಸಿ ನಕಲಿ ಜೇನು ಮಾರಾಟ ಮಾಡುತ್ತಿದ್ದಾರೆ. ಸದ್ಯ ಈ ಜೇನಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಪ್ರಕರಣವನ್ನು ಪೊಲೀಸರಿಗೆ ಮುಟ್ಟಿಸಲಾಗಿದೆ. ಇಂಥ ಪ್ರಕರಣಗಳಲ್ಲಿ ಗ್ರಾಹಕರೂ ಎಚ್ಚರಿಕೆಯಿಂದ ಇರಬೇಕು. ನಕಲಿ ವಸ್ತುಗಳಿಂದ ದೂರವಿದ್ದು ಆರೋಗ್ಯ ರಕ್ಷಿಸಿಕೊಳ್ಳಬೇಕು.

ಡಾ. ಅನಿಲ್ ಧಾವನ್, ಕೊಡಗು ಜಿಲ್ಲಾ ಆಹಾರ ಮತ್ತು ಸುರಕ್ಷತಾ ಪ್ರಾಧಿಕಾರದ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net