ಸಂಘದ ಬೆಳವಣಿಗೆಗೆ ಪ್ರಾಮಾಣಿಕತೆ ಅಗತ್ಯ

Honesty is essential to the growth of the association
ಜಾಲಿಹಾಳ ಗ್ರಾಮದ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂಘದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ನೂತನ ಚಿನ್ನು ಸೌಹಾರ್ದ ಪತ್ತಿನ ಸಹಕಾರಿ ಸಂಘವನ್ನು ಶಾಸಕ ಲಕ್ಷ್ಮಣ ಸವದಿ, ಸಂಸದ ಪಿ.ಸಿ.ಗದ್ದಿಗೌಡರ ಉದ್ಘಾಟಿಸಿದರು. ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಸಿದ್ದರಾಮಯ್ಯ ಹೊಳಿಮಠ ಮಹಾಸ್ವಾಮಿಗಳು, ಎಸ್.ಆರ್.ಪಾಟೀಲ, ಎಂ.ಕೆ. ಪಟ್ಟಣಶೆಟ್ಟಿ, ಶೇಖರಗೌಡ ಪಾಟೀಲ ಮತ್ತಿತರರಿದ್ದಾರೆ.
Published on

ಬಾದಾಮಿ: ಸಹಕಾರಿ ಸಂಘಗಳನ್ನು ಕಟ್ಟುವುದು ಸುಲಭ. ಆದರೆ, ಪ್ರಾಮಾಣಿಕತೆ, ನಿಷ್ಠೆ, ಬದ್ಧತೆಯಿಂದ ಕೆಲಸ ಮಾಡಿದರೆ ಮಾತ್ರ ಸಂಘ ಬೆಳೆಯಲು ಸಾಧ್ಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ಜಾಲಿಹಾಳ ಗ್ರಾಮದ ರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿನ್ನು ಸೌಹಾರ್ದ ಪತ್ತಿನ ಸಹಕಾರಿ ಸಂಘದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲರೂ ವಿಶ್ವಾಸದಿಂದ ಕೆಲಸ ಮಾಡಿ ಸಂಘವನ್ನು ಹೆಮ್ಮರವಾಗಿ ಬೆಳೆಸಿರಿ ಎಂದು ಶುಭ ಕೋರಿದರು.

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಗ್ರಾಮೀಣ ಭಾಗದವರಿಗೆ ಹಣಕಾಸಿನ ಸಹಾಯ ದೊರೆಯಲು ಸಹಕಾರಿಯಾಗುವಂತೆ ಸಂಘ ಸಂಸ್ಥೆಗಳು ಬಡವರು, ನಿರ್ಗತಿಕರಿಗೆ ಸಾಲ ಸೌಲಭ್ಯ ಒದಗಿಸಬೇಕು. ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಮರುಪಾವತಿ ಮಾಡಿ ಸಂಘಗಳ ಬೆಳವಣಿಗೆಗೆ ಸಹಕಾರ ನೀಡಬೇಕು. ಎಲ್ಲರೂ ಸಂಘಗಳಲ್ಲಿ ಠೇವಣಿ ಇಡುವ ಮೂಲಕ ಸಂಘ ಬೆಳೆಯುವಂತೆ ಮಾಡಿ, ಇದರಿಂದ ಬಹಳ ಜನರಿಗೆ ಸಾಲ ನೀಡಲು ಸಹಾಯವಾಗುತ್ತದೆ ಎಂದರು.

ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು, ಹೊಳಿ ಬಬಲಾದಿಯ ವೇದಮೂರ್ತಿ ಸಿದ್ದರಾಮಯ್ಯ ಹೊಳಿಮಠ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಮಾಜಿ ಸಚಿವ ಎಸ್.ಆರ್.ಪಾಟೀಲ, ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಮಾತನಾಡಿದರು.

ಚಿನ್ನು ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶೇಖರಗೌಡ ಪಾಟೀಲ ಅಧ್ಯಕ್ಷತೆ ವಹಿಸಿ, ಅವರ ಕನಸು, ದೂರದೃಷ್ಟಿ, ಸಂಘವನ್ನು ಕಟ್ಟುವ ಬಗ್ಗೆ ಸವಿವರವಾಗಿ ಮಾತನಾಡಿದರು.

ವೇದಿಕೆ ಮೇಲೆ ಮಾಜಿ ಶಾಸಕ ರಾಜಶೇಖರ ಶೀಲವಂತರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಅರವಿಂದಗೌಡ ಪಾಟೀಲ, ಮಲ್ಲಿಕಾರ್ಜುನ ಲೋಣಿ, ದಶರಥ ಗಾಣಿಗೇರ, ವಿರುಪಾಕ್ಷಗೌಡ ಪಾಟೀಲ, ಯಚ್ಚರಗೌಡ ಪಾಟೀಲ, ಅಡಿವೆಪ್ಪ ಡಾಣಕಶಿರೂರ, ಗಂಗಯ್ಯ ಮುಚಖಂಡಿಮಠ, ಮಹಾದೇವಗೌಡ ಪಾಟೀಲ, ಬಸವರಾಜ ಗೊನ್ನಾಗರ, ಆರ್.ಜಿ.ಪಾಟೀಲ, ಎಸ್.ಎ.ಕಾಳಗಿ, ಲಿಂಗರಡ್ಡಿ ಕುರ್ತಕೋಟಿ, ಎ್.ಆರ್.ಪಾಟೀಲ(ಖ್ಯಾಡ), ಎ್.ಆರ್.ಪಾಟೀಲ(ಮಣ್ಣೇರಿ), ಎಸ್.ಎ.ನೀರಲಗಿ ಇದ್ದರು.

ಬಸಮ್ಮ ನರಸಾಪೂರ ಕಾರ್ಯಕ್ರಮ ನಿರೂಪಿಸಿದರು. ಶೀಲಾ ಗೌಡರ ವಂದಿಸಿದರು. ಕಾರ್ಯಕ್ರಮದಲ್ಲಿ ಜಾಲಿಹಾಳ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಗ್ರಾಹಕರು, ಹಿರಿಯರು, ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net