

ಹಗರಿಬೊಮ್ಮನಹಳ್ಳಿ: ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆ ನಿಮ್ಮಿತ್ತ ಹಂಪಾಪಟ್ಟಣ ಗ್ರಾಮದ ನಗರೇಶ್ವರ ದೇವಸ್ಥಾನದಲ್ಲಿ ಮಗಿಮಾವಿನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯರಿಗೆ ಶ್ರೀಮಾತಾ ಸೇವಾ ಟ್ರಸ್ಟ್‌ನಿಂದ ಸನ್ಮಾನ ಕಾರ್ಯಕ್ರಮ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಶುಶ್ರೂಷಕಿ ವಿನೋದಾ ಮಾತನಾಡಿ, ಕೆಲಸವನ್ನು ಪ್ರಮಾಣಿಕವಾಗಿ ಮಾಡಿದಲ್ಲಿ ಜನರ ಪ್ರೀತಿ, ವಿಶ್ವಾಸಗಳಿಸಲು ಸಾಧ್ಯ. ಆಸ್ಪತ್ರೆಗೆ ಬರುವವರಿಗೆ ನಗುನಗುತ್ತಲೇ ಮಾತನಾಡಿಸಿ, ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ, ಶೇ.88 ಅಂಕಪಡೆದ ಗ್ರಾಮದ ವಿದ್ಯಾರ್ಥಿನಿ ಪೂರ್ಣಿಮಾಳನ್ನು ಸನ್ಮಾನಿಸಲಾಯಿತು.
ಮಾತಾ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಶ್ರೀನಿವಾಸ, ಹಂಪಾಪಟ್ಟಣ ಗ್ರಾಪಂ.ಅಧ್ಯಕ್ಷೆ ಉಪ್ಪಾರ್ ಹುಲಿಗೆಮ್ಮ ಕಾಳಪ್ಪ, ರೈತ ಸಂಘದ ವಿಜಯನಗರ ಜಿಲ್ಲಾ ಉಪಾಧ್ಯಕ್ಷ ಕುಬೇರ, ತಾಲೂಕು ಪ್ರಧಾನ ಕಾರ್ಯದರ್ಶಿ ಶೀಗೇನೆಹಳ್ಳಿ ಬಸವರಾಜ, ಮುಖ್ಯಶಿಕ್ಷಕ ಮಣಿಗಾರ ಉಮೇಶ್, ಜನನಿ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಕೇಶವಮೂರ್ತಿ, ಪ್ರಮುಖರಾದ ಗಾಳೆಮ್ಮನವರ ಹುಲಗಪ್ಪ, ಉಮಾ ಕುಬೇರ, ಆರ್.ಖಾಜಾ, ಹಡಗಲಿ ಖಾಜಾಹುಸೇನ್, ನಾಗರಾಜ ಗಂಟಿ, ಜಿ.ಪಕೀರಪ್ಪ ಇತರರಿದ್ದರು.