ಪ್ರಾಮಾಣಿಕ ಸೇವೆಗೆ ಗೌರವ ಖಚಿತ

21Ravig4
ಉತ್ತಮ ಗ್ರಂಥಪಾಲಕ ರಾಜ್ಯ ಪ್ರಶಸ್ತಿ ಪಡೆದ ಗ್ರಂಥಪಾಲಕ ಪ್ರಕಾಶ ಇಚಲಕರಂಜಿ ಅವರನ್ನು ಭಾನುವಾರ ಸನ್ಮಾನಿಸಲಾಯಿತು. ಬಸವರಾಜ ಸುಣಗಾರ, ರವಿ ಶಾಸ್ತ್ರಿ, ಸಂಜೀವ ಮುತ್ತೆಪ್ಪಗೋಳ, ಗಣಪತಿ ಬಾರ್ಕಿ, ಅಶೋಕ ಕಬ್ಬಲಿಗೇರ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಎಸ್.ಪಾಟೀಲ ಮಾತನಾಡಿದರು. ಉಪ ತಹಸೀಲ್ದಾರ್ ಚನ್ನಮ್ಮ ಶೀಗಿಹಳ್ಳಿ ಇದ್ದರು.
Published on

ಬೆಳಗಾವಿ: ನಿಷ್ಠೆ, ಶ್ರದ್ಧೆ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ಸಮಾಜ, ಸರ್ಕಾರ ಖಂಡಿತವಾಗಿಯೂ ಗುರುತಿಸಿ, ಪ್ರೋತ್ಸಾಹಿಸುತ್ತದೆ ಎಂದು ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನ ಅಧ್ಯಕ್ಷ ಬಸವರಾಜ ಸುಣಗಾರ ಹೇಳಿದರು.

ನಗರದ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಭಾನುವಾರ ‘ಉತ್ತಮ ಗ್ರಂಥಪಾಲಕ’ ರಾಜ್ಯ ಪ್ರಶಸ್ತಿ ಪುರಸ್ಕೃತ ಗ್ರಂಥಪಾಲಕ ಪ್ರಕಾಶ ಇಚಲಕರಂಜಿ ಅವರನ್ನು ಸನ್ಮಾನಿಸಿ ಮಾತನಾಡಿ, ಯಾವುದೇ ಪ್ರಶಸ್ತಿ, ಗೌರವ ಸಿಕ್ಕರೆ ಮಾಡಿದ ಕೆಲಸ ಇತರರ ಗಮನ ಸೆಳೆದ ತೃಪ್ತಿ ಸಾಧಕರಿಗೆ ಸಿಗುತ್ತದೆ ಎಂದರು. ಹಿರಿಯ ವಕೀಲರಾದ ರವಿ ಶಾಸ್ತ್ರಿ, ಸಂಜೀವ ಮುತ್ತೆಪ್ಪಗೋಳ, ಗಣಪತಿ ಬಾರ್ಕಿ, ಅಶೋಕ ಕಬ್ಬಲಿಗೇರ, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಎಸ್.ಪಾಟೀಲ ಮಾತನಾಡಿದರು. ಉಪ ತಹಸೀಲ್ದಾರ್ ಚನ್ನಮ್ಮ ಶೀಗಿಹಳ್ಳಿ, ನಗರ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕುಮಾರಸ್ವಾಮಿ ಚರಂತಿಮಠ, ಮುಖ್ಯೋಪಾಧ್ಯಾಯ ಬಿ.ಬಿ.ಬಾಯಣ್ಣವರ, ಗ್ರಂಥಾಲಯ ಸಿಬ್ಬಂದಿ ಎಚ್.ಆರ್.ಬಿಲಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net