

ರೋಣ: ಜನಪರ ಅಭಿವೃದ್ಧಿ ಕಾರ್ಯಕ್ರಮ ಮಾಡುವವನೇ ನಿಜವಾದ ಜನನಾಯಕ. ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅದರೊಟ್ಟಿಗೆ ಅನುದಾನ ತರಲು ಮುಂದಾಗುತ್ತೇನೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಸಮೀಪದ ಹುಲ್ಲೂರು ಗ್ರಾಮದಲ್ಲಿ ಅಂದಾಜು 41.97 ಲಕ್ಷ ರೂ. ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ, 12 ಲಕ್ಷ ರೂ. ವೆಚ್ಚದಲ್ಲಿ ಜಿಮ್ ಕಟ್ಟಡ ಉದ್ಘಾಟನೆ, 60 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ, 20 ಲಕ್ಷ ರೂ. ವೆಚ್ಚದಲ್ಲಿ ಎಸ್.ಸಿ. ಕಾಲನಿಯಲ್ಲಿ ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹೊಳೆಆಲೂರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದಶರಥ ಗಾಣಿಗೇರ ಮಾತನಾಡಿ, ಎರಡು ವರ್ಷಗಳಿಂದ ಗ್ರಾಮದಲ್ಲಿ ಯಾವುದೇ ಕಾರ್ಯಗಳು ನಡೆದಿಲ್ಲ. ಮಳೆ ಬಂದರೆ ಹಳ್ಳದ ನೀರು ಗ್ರಾಮದೊಳಗೆ ಬರುತ್ತದೆ. ಆದ್ದರಿಂದ ಹಿರೇಹಳ್ಳದ ಹೂಳೆತ್ತಬೇಕು ಎಂದು ಒತ್ತಾಯಿಸಿದರು.
ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ಪಿ. ಪಾಟೀಲ ಮಾತನಾಡಿ, ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾ.ಪಂ ಕಾರ್ಯಾಲಯ ಬಹಳ ಪ್ರಾಮುಖ್ಯ ಪಡೆದಿದೆ. ಜನರ ಅಭಿವೃದ್ಧಿಗೆ ಗ್ರಾ.ಪಂ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.
ತಾಪಂ ಇಒ ಚಂದ್ರಶೇಖರ ಕಂದಕೂರು, ತಾಪಂ ಮಾಜಿ ಅಧ್ಯಕ್ಷ ವಿ.ಎಸ್. ಹಿರೇಮಠ, ನೀಲವ್ವ ಅಬ್ಬಿಗೇರಿ, ವಿಜಯಲಕ್ಷ್ಮಿ ಹುಬ್ಬಳ್ಳಿ, ಎಸ್.ಕೆ. ಪಾಟೀಲ, ಸೋಮು ಚರೇದ, ಮುತ್ತಣ್ಣ ಜಂಗಣ್ಣವರ, ರೇಣುಕಾ ಪೂಜಾರ, ನಂದಾ ಬರಡ್ಡಿ, ಗೀತಾ ಪಾಟೀಲ, ಬಸವರಾಜ ಬ್ಯಾಳಿ, ವಿರೂಪಾಕ್ಷ ಗಟ್ಟಿ, ಷಣ್ಮುಖಗೌಡ ಮೆಣಸಗಿ, ಯಲ್ಲಪ್ಪಗೌಡ ಕೆಂಚನಗೌಡ್ರ, ಮಹಾದೇವಿ ಕಲ್ಗುಡಿ, ಬಸವರಾಜ ಅವರಾದಿ, ,ಶಾಂತವ್ವ ಅನವಾಲದ, ಶರಣಪ್ಪ ಅಂಗಡಿ, ಪಿಡಿಒ ಈಶ್ವರ ಪತ್ತಾರ ಇದ್ದರು.