

ಬೆಂಗಳೂರು: ಮೈಸೂರು ರಸ್ತೆಯ ರಾಜರಾಜೇಶ್ವರಿ ಗೇಟ್ ಬಳಿ ಹೊಸ ಹೋಂಡಾ ಶೋರೂಂ ಅನ್ನು ಬುಧವಾರ ಆರಂಭಿಸಲಾಗಿದೆ. ಕಾರುಗಳ ಮಾರಾಟ, ಸರ್ವೀಸ್, ಹಳೆಯ ಕಾರುಗಳು ವಿನಿಮಯ ಮತ್ತು ಹಲವು ಸೌಲಭ್ಯಗಳು ಒಂದೇ ಸೂರಿನಡಿ ಸಿಗಲಿವೆ.
ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ನ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ನಿರ್ದೇಶಕ ರಾಜೇಶ್ ಗೋಯೆಲ್ ಮಾತನಾಡಿ, 2005ರಲ್ಲಿ ಮೊದಲ ಹೋಂಡಾ ಕಾರು ಮಾರಾಟ ಮಳಿಗೆಯನ್ನು ಆರಂಭಿಸಲಾಯಿತು. 15 ವರ್ಷಗಳಲ್ಲಿ ಸಾಕಷ್ಟು ಸವಾಲುಗಳನ್ನು ಮೆಟ್ಟಿನಿಂತು ದೇಶದ 364 ನಗರಗಳಲ್ಲಿ 375 ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಕರ್ನಾಟಕದಲ್ಲಿ 19 ಶೋರೂಂಗಳಿದ್ದು, ಬೆಂಗಳೂರಿನಲ್ಲಿ 3ನೇ ಶೋರೂಂ ಇದಾಗಿದೆ ಎಂದು ತಿಳಿಸಿದರು.
1,84,500 ಕಾರು ಮಾರಾಟ: 2018-19ನೇ ಸಾಲಿನ ವಿತ್ತೀಯ ವರ್ಷದಲ್ಲಿ ದೇಶಾದ್ಯಂತ 1,84,500 ಹೋಂಡಾ ಕಾರುಗಳನ್ನು ಮಾರಾಟ ಮಾಡಲಾಗಿದೆ. ಕರ್ನಾಟಕದಲ್ಲಿ 12,575 ಕಾರುಗಳು ಮಾರಾಟವಾಗಿವೆ. ಕೆಲ ತಿಂಗಳಿಂದ ಕಾರುಗಳ ಮಾರಾಟ ಇಳಿದಿದೆ. ಮುಂದಿನ ದಿನಗಳಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆ ಇರುವುದಾಗಿ ಹೇಳಿದರು.
ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡಿ: ಶೋರೂಂ ಸಿಬ್ಬಂದಿ ಹಾಗೂ ಅಧಿಕಾರಿಗಳು ಗ್ರಾಹಕರ ಜತೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಉತ್ತಮ ಸೇವೆ ನೀಡಿ ಅವರ ವಿಶ್ವಾಸ ಗಳಿಸಿಕೊಳ್ಳಬೇಕು. ಹಣಕಾಸಿನ ವ್ಯವಹಾರದಲ್ಲಿ ವ್ಯತ್ಯಾಸವಾಗದಂತೆ ಎಚ್ಚರಿಕೆ ವಹಿಸಬೇಕು. ಹೋಂಡಾ ಬ್ರಾ್ಯಂಡ್ಗೆ ಕಳಂಕ ತಟ್ಟದ ರೀತಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಸಲಹೆ ನೀಡಿದರು.
ಹೋಂಡಾ ಅಮೇಜ್ ಕಾರು ಬಿಡುಗಡೆ: ಬಿಎಸ್ 6 ಪೆಟ್ರೋಲ್ ಇಂಜಿನ್ ಹೊಂದಿರುವ ಹೊಸ ಹೋಂಡಾ ಅಮೇಜ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಈ ಕಾರು 19.5 ಕಿ.ಮೀ ಇಂಧನಕ್ಷಮತೆ ಹೊಂದಿದೆ. ಪರಿಸರಸ್ನೇಹಿಯಾಗಿದ್ದು, 5.93 ಲಕ್ಷ ರೂ. ಆರಂಭಿಕ ಬೆಲೆ ಹೊಂದಿದೆ. ಎಲ್ಇಡಿ ಹೆಡ್ಲ್ಯಾಂಪ್ಸ್, ಅಲಾಯ್ ವ್ಹೀಲ್ಸ್ ಸೇರಿ ಮತ್ತಿತರರ ಸೌಲಭ್ಯಗಳಿವೆ. ಕಾರಿನ ಒಳಾಂಗಣವೂ ಆಕರ್ಷಕವಾಗಿದೆ ಎಂದು ಕರ್ನಾಟಕ ಮಾರಾಟ ಪ್ರಾದೇಶಿಕ ವ್ಯವಸ್ಥಾಪಕ ಅಶೀಷ್ ಕುಮಾರ್ ಪ್ರಥಿಹರಿ ತಿಳಿಸಿದರು. ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ನ ನೆಟ್ವರ್ಕ್ ಡೆವಲಪ್ವೆುಂಟ್ ಪ್ರಧಾನ ವ್ಯವಸ್ಥಾಪಕ ಅರವಿಂದ್ ಭಟ್ನಾಗರ್ ಮತ್ತಿತರರಿದ್ದರು.