ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಫೆ.9ರಿಂದ

Published on

ಮೈಸೂರು: ಭುವನ್‌ರಾಜ್ ಫೌಂಡೇಷನ್ ಹಾಗೂ ಚೇತನ್‌ರಾಜ್ ಎನ್.ಅಭಿಮಾನಿಗಳ ಬಳಗದಿಂದ ಫೆ. 9ರಿಂದ 11ರವರೆಗೆ ಜೆ.ಪಿ.ಕಪ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಜೆ.ಪಿ. ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದ್ದು, ಮೊದಲನೇ ಬಹುಮಾನವಾಗಿ ಒಂದು ಲಕ್ಷ ರೂ. ಎರಡನೇ ಬಹುಮಾನವಾಗಿ 50 ಸಾವಿರ ರೂ. ನಗದು ನೀಡಲಾಗುವುದು. ಈಗಾಗಲೇ 10ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿವೆ ಎಂದು ಅಭಿಮಾನಿ ಬಳಗದ ಸಹ ಕಾರ್ಯದರ್ಶಿ ಗೋಪಾಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.9ರಂದು ಬೆಳಗ್ಗೆ 9.30ಕ್ಕೆ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಪ್ರತಾಪ್‌ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಇನ್ನಿತರರು ಭಾಗವಹಿಸಲಿದ್ದಾರೆ ಎಂದರು. ಸಂಸ್ಥೆಯ ಶಶಿಧರ್, ಚಂದ್ರಶೇಖರ್, ಯೋಗೇಶ್, ವಿಕಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net