

ಸೋಮವಾರಪೇಟೆ: ಮಲೇಷಿಯಾದ ಕೌಲಾಲಂಪುರ್‌ನಲ್ಲಿ ಆ.7 ರಿಂದ 12ರವರೆಗೆ ನಡೆಯುವ ಅಂತಾರಾಷ್ಟ್ರೀಯ ಕರಾಟೆ ಟೈಕಾಂಡೋ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಮೂಲತ: ಸೋಮವಾರಪೇಟೆ ಆಲೇಕಟ್ಟೆ ನಿವಾಸಿ ಹೊನಾಲಿ ಕಿಶೋರ್ ಭಾಗವಹಿಸುತ್ತಿದ್ದಾಳೆ.
ಎಸ್.ಜಿ. ಮಾಸ್ಟರ್ಸ್ ಅಸೋಸಿಯೇಷನ್ ವತಿಯಿಂದ ಈಚೆಗೆ ಬೆಂಗಳೂರಿನಲ್ಲಿ ನಡೆಸಿದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಇವರು, ಇದೀಗ ಮಲೇಷಿಯಾದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಭಾರತದ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪಟ್ಟಣ ಸಮೀಪದ ಚೌಡ್ಲು ಆಲೇಕಟ್ಟೆ ರಸ್ತೆ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಹಾಗೂ ಪ್ರೀತಿ ದಂಪತಿ ಪುತ್ರಿ ಹೊನಾಲಿ ಕಿಶೋರ್, ಬೆಂಗಳೂರು ಸಿಂಧಿ ಹೈಸ್ಕೂಲ್‌ನಲ್ಲಿ 5ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಬೆಂಗಳೂರಿನಲ್ಲಿ ಶಾಸಕ ಮಂತರ್ ಗೌಡ ಅವರನ್ನು ಭೇಟಿ ಮಾಡಿದ ಹೊನಾಲಿ ಕಿಶೋರ್ ಅವರನ್ನು ಶಾಸಕರು ಸನ್ಮಾನಿಸಿದರು.