ಕರೊನಾ ಜಾಗೃತಿಗಾಗಿ ಸಮಿತಿ ರಚನೆ

hnl jagruti july 20
Published on

ಹೊನ್ನಾಳಿ: ಹಳ್ಳಿಗರಲ್ಲಿ ಕರೊನಾ ಜಾಗೃತಿ ಮೂಡಿಸಲು ಗ್ರಾಪಂ ಪಿಡಿಒ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಅಧಿಕಾರಿಗಳಿಗೆ ಸೂಚಿಸಿದರು.

ಲಿಂಗಾಪುರದಲ್ಲಿ ಸೋಮವಾರ ಸಿಸಿ ರಸ್ತೆಗೆ ಚಾಲನೆ ನೀಡಿ ಮಾತನಾಡಿ, ಜನತೆ ಇನ್ನಾದರೂ ಜಾಗೃತರಾಗಬೇಕು. ಎಚ್ಚರ ತಪ್ಪಿದರೆ ಕರೊನಾ ಅಪ್ಪುವ ಸಾಧ್ಯತೆ ಇದೆ. ಹೀಗಾಗಿ ಹೊರಗಡೆ ಅನಾವಶ್ಯಕವಾಗಿ ಓಡಾಡಬೇಡಿ. ಮಾಸ್ಕ್ ಕಡ್ಡಾಯವಾಗಿ ಬಳಸಿ ಎಂದು ಮನವಿ ಮಾಡಿದರು.

3.43 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಲಿಂಗಾಪುರ, ಹೊಸಹಳ್ಳಿ, ಹುರುಳೇಹಳ್ಳಿ, ಬಾಗವಾಡಿ, ಹನಗವಾಡಿ, ಹೊಸಹಳ್ಳಿ ಮೊದಲ ಕ್ಯಾಂಪ್‌ನಲ್ಲಿ ಸಿಸಿ ರಸ್ತೆ ನಿರ್ಮಿಸುತ್ತಿರುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net