ಹೋಮಿಯೋಪಥಿ ಔಷಧಿ ರೋಗಿಗಳ ಸಂಜೀವಿನಿ

5 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೋಮಿಯೋಪಥಿ ಔಷಧಿಯು ರೋಗಿಗಳ ಪಾಲಿಗೆ ಸಂಜೀವಿನಿ. ಕೇವಲ ರೋಗ ಪರಿಹಾರ ಮಾಡುವುದಲ್ಲದೆ, ರೋಗವನ್ನು ಬುಡ ಸಮೇತ ಕಿತ್ತು ಹಾಕುತ್ತದೆ ಎಂದು ಬಿ.ಡಿ.ಜತ್ತಿ ಹೋಮಿಯೋಪಥಿ ಮೆಡಿಕಲ್​ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ ಕುಬಸದ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂವು ಡಾ. ಎಚ್​. ಎಚ್​. ಸಿನ್ನೂರ ದತ್ತಿ ನಿಮಿತ್ತ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೋಮಿಯೋಪಥಿ ಒಂದು ಪರಿರ್ಪೂಣ ಚಿಕಿತ್ಸೆ ಹೇಗೆ? ಕುರಿತು ಉಪನ್ಯಾಸ ನೀಡಿದರು.
ಹೋಮಿಯೋಪಥಿಗೆ 240 ವರ್ಷಗಳ ಸುಧೀರ್ವಾದ ಇತಿಹಾಸವಿದೆ. ಜರ್ಮನಿಯ ಖ್ಯಾತ ವೈದ್ಯ ಸಾಮ್ಯುವೆಲ್​ ಹ್ಯಾನಮನ್​ ಸಂಶೋಧನೆ ಲವಾಗಿ ಈ ಔಷಧ ಪದ್ಧತಿ ಆರಂಭವಾಯಿತು. ಹ್ಯಾನಿಮನ್​ ಜನ್ಮದಿನವಾದ ಏ. 10ರಂದು ಹೋಮಿಯೋಪಥಿ ದಿನ ಆಚರಿಸಲಾಗುತ್ತದೆ. ಧೀರ್ ಕಾಲಿನ ರೋಗಗಳಿಗೆ ರಾಮಬಾಣವಾಗಿದ್ದು, ಜಗತ್ತಿನಲ್ಲೇ ಅತೀ ಹೆಚ್ಚು ಸುರತ, ಪರಿಣಾಮಕಾರಿ ಔಷಧ ಪದ್ಧತಿ. ಔಷಧ ಸೇವನೆಯಿಂದ ಅಡ್ಡಪರಿಣಾಮಗಳಿಲ್ಲ ಎಂದರು.
ಸಾಹಿತಿ ಡಾ. ಶಾಂತಾ ಇಮ್ರಾಪುರ ಅವರು "ಗುಡ್ಡಾಪುರದ ಚಿಜ್ಯೋತಿ ದಾನಮ್ಮದೇವಿ' ಕಾದಂಬರಿ ಪರಿಚಯಿಸಿ, ದಾನಮ್ಮದೇವಿ ದಣ ಭಾರತದ ಭಕ್ತರ ಪಾಲಿನ ಕಾಮಧೇನು. ಬೇಡಿ ಬಂದವರಿಗೆ ವರದಾತೆ. ಇವಳ ದಾನಗುಣದಿಂದಲೇ ಬಸವಣ್ಣ ದಾನಮ್ಮನೆಂದು ಕರೆದಿದ್ದಾರೆ. ಮಹಾನ್​ ಜ್ಞಾನಯೋಗಿ, ಕರ್ಮಯೋಗಿ, ಶಿವಯೋಗಿಯಾದ ದಾನಮ್ಮ ತನ್ನ ಪವಾಡಗಳಿಂದ ಭಕ್ತರ ಭಾವಕೋಶದಲ್ಲಿ ಸ್ಮರಣೀಯಳಾಗಿದ್ದಾಳೆ ಎಂದರು.
ಶಾಂತಲಾ ಯಡ್ರಾವಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಚಂದ್ರಕಾಂತ ಬೆಲ್ಲದ ಕ.ವಿ.ವ.ಸಂದ ಅಧ್ಯತೆ ವಹಿಸಿದ್ದರು. ಡಾ. ಪಾರ್ವತಿ ಹಾಲಭಾವಿ, ಸುರೇಶ ಹಾಲಭಾವಿ, ಡಾ. ಬಾಳಣ್ಣ ಶೀಗಿಹಳ್ಳಿ, ಸುಭಾಷ ಹತ್ತಿಕಾಳ, ನಿಂಗಣ್ಣ ಕುಂಟಿ, ಲೀಲಕ್ಕ ಬೆಲ್ಲದ, ವಿಜಯಲಕ್ಷಿ$್ಮ ಕಲ್ಯಾಣಶೆಟ್ಟರ, ಸೀತಾ ಛಪ್ಪರ, ಶಶಿಕಲಾ ಪಾಟೀಲ, ಡಾ. ಬಸವರಾಜ ಶೀಲವಂತರ, ವೀಣಾ ಸಂಕನಗೌಡರ, ಸರೋಜಾ ಪಂಡಿತ, ಇತರರು ಇದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net