

ತೆಲಸಂಗ: ಅಮರಶಿಲ್ಪಿ ಜಕಣಾಚಾರಿ ಅವರ ಶಿಲ್ಪಕಲೆ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಶಿಲ್ಪಕಲೆಗೆ ವಿಶ್ವಕರ್ಮರ ಕೊಡುಗೆ ಅಪಾರ ಎಂದು ವಿಶ್ವಕರ್ಮ ಸಮುದಾಯದ ಮುಖಂಡ ಕಾಳಪ್ಪ ಬಡಿಗೇರ ಹೇಳಿದರು.
ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಶಿಲ್ಪಕಲೆಗಳ ತವರೂರಾಗಿದೆ ಎಂದರು. ವಿಶ್ವಕರ್ಮ ಸಮುದಾಯದ ಹಿರಿಯರಾದ ಬಾಳಕೃಷ್ಣ ಬಡಿಗೇರ, ಸಂತೋಷ ಬಡಿಗೇರ, ವಿಜಯ ಪತ್ತಾರ, ವೀರೇಶ ಬಡಿಗೇರ ಇತರರು ಇದ್ದರು.