ಕೋಟದಲ್ಲಿ ಸಂಸದರಿಗೆ ಹುಟ್ಟೂರ ಗೌರವ

sanmana
ಕೋಟ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ಸಾರ್ವಜನಿಕ ಗಣೇಶೋತ್ಸವ ದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹುಟ್ಟೂರ ಸನ್ಮಾನ ನೀಡಿ ಗೌರವಿಸಲಾಯಿತು
Published on

ಕೋಟ: ಇಲ್ಲಿನ ಅಮೃತೇಶ್ವರಿ ದೇಗುಲದ ಸಭಾಂಗಣದಲ್ಲಿ ನಡೆದ 49ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಾರೋಪದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹುಟ್ಟೂರ ಸನ್ಮಾನ ನೀಡಿ ಗೌರವಿಸಲಾಯಿತು.

ಬಳಿಕ ಮೆಸ್ಕಾಂ ಸಿಬ್ಬಂದಿ ಉಮ್ಮರ್, ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ವಿಶ್ವನಾಥ್, ರಾಮದಾಸ್,ಯಕ್ಷಗುರು ನರಸಿಂಹ ತುಂಗ, ಉರಗ ರಕ್ಷಕ ವಿಜಯ ಪೂಜಾರಿ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಮಿತಿ ಗೌರವಾಧ್ಯಕ್ಷ ಆನಂದ್ ಸಿ.ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕೋಟ ಆರಕ್ಷಕ ಠಾಣಾಧಿಕಾರಿ ಸುಧಾ ಪ್ರಭು, ಕೋಟ ಸಾಲಿಗ್ರಾಮ ರೋಟರಿ ಕ್ಲಬ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಕುಂದಾಪುರ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಶೋಕ್ ಆಚಾರ್,ಉದ್ಯಮಿ ಸುರೇಶ್ ಪ್ರಭು , ಸಮಿತಿ ಅಧ್ಯಕ್ಷ ರಮಾನಾಥ್ ಜೋಗಿ ಮತ್ತಿತರರು ಇದ್ದರು. ರಂಜಿತ್‌ಕುಮಾರ್, ಜೀವನ್‌ಕುಮಾರ್, ಅವಿನಾಶ್ ಮರಕಾಲ ಸನ್ಮಾನಪತ್ರ ವಾಚಿಸಿದರು. ಚಂದ್ರ ಪೂಜಾರಿ ಸ್ವಾಗತಿಸಿದರು. ಚಂದ್ರಯ್ಯ ಆಚಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net